alex Certify ಉತ್ತಮ ಆರೋಗ್ಯಕ್ಕೆ ಬೆಸ್ಟ್ ಸ್ಪ್ರೌಟ್ಸ್ ಸಲಾಡ್‌ ಸೇವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯಕ್ಕೆ ಬೆಸ್ಟ್ ಸ್ಪ್ರೌಟ್ಸ್ ಸಲಾಡ್‌ ಸೇವನೆ

ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದ ವರದಾನ. ದಪ್ಪಗಾಗಿದ್ದೀನಿ, ಬೊಜ್ಜು ಬಂದಿದೆ ಎಂದು ಹಲವರು ಬೆಳಗ್ಗಿನ ತಿಂಡಿಯನ್ನೇ ಬಿಡುತ್ತಾರೆ. ಹೀಗೆ ಮಾಡುವವರು ಸ್ಪ್ರೌಟ್ ಸಲಾಡ್ ನ್ನು ಸೇವಿಸಿ. ಇದು ದೇಹವನ್ನು ಸಣ್ಣದಾಗಿಸುವುದರ ಜತೆಗೆ ಆರೋಗ್ಯವನ್ನೂ ಕಾಪಾಡುತ್ತೆ.

ಮೊಳಕೆ ಕಾಳುಗಳ ಸೇವನೆ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಹಜವಾಗಿಸಿ ಟೈಪ್ 2 ಡಯಾಬಿಟಿಸ್ ಅಪಾಯವನ್ನು ತಪ್ಪಿಸುತ್ತದೆ.

ಸ್ಪ್ರೌಟ್ಸ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು :
* ಮೊಳಕೆ ಬರಿಸಿದ ಕಾಳುಗಳು- 1 1/2ಕಪ್
* ಆಪಲ್ ಟೊಮೋಟೊ- 1 ಕಪ್
* ಹೆಚ್ಚಿದ ಸೌತೆಕಾಯಿ- 1 ಕಪ್
* ಹೆಚ್ಚಿದ ಈರುಳ್ಳಿ- ಸ್ವಲ್ಪ (ಬೇಕಿದ್ದರೆ ಮಾತ್ರ)
* ಕತ್ತರಿಸಿದ ಕರಿಬೇವು- ಒಂದು ಎಸಳು
* ಕಾಳು ಮೆಣಸು- 1/2 ಟೇಬಲ್ ಚಮಚ
* ಉಪ್ಪು- ರುಚಿಗೆ ತಕ್ಕಷ್ಟು
* ಹುರಿದ ಜೀರಿಗೆ- 1 ಚಮಚ,
* ನಿಂಬೆ ರಸ- 1 ಚಮಚ,
* ಗಟ್ಟಿ ಮೊಸರು- 2 ಎರಡು ಟೇಬಲ್ ಚಮಚ
* ಹಸಿ ಶುಂಠಿ ಪೇಸ್ಟ್- 1 ಚಮಚ,
* ಹೆಚ್ಚಿದ ಕೊತ್ತಂಬರಿಸೊಪ್ಪು- ಸ್ವಲ್ಪ

ಮಾಡುವ ವಿಧಾನ :

ಒಂದು ಪಾತ್ರೆಗೆ ಮೊಳಕೆ ಕಾಳುಗಳು, ಉಪ್ಪು, ಸ್ವಲ್ಪ ನೀರು ಹಾಕಿ ಮೊಳಕೆ ಕಾಳು, ಆಪಲ್ ಟೊಮೆಟೊಗಳನ್ನು ಹಾಫ್ ಬಾಯಿಲ್ ಮಾಡಿ. ನಂತರ ಮೊಳಕೆ ಕಾಳುಗಳು ತಣ್ಣಗಾಗಲು ಬಿಡಿ.

ಈಗ ಒಂದು ಬೌಲ್ ನಲ್ಲಿ ಗಟ್ಟಿ ಮೊಸರು, ಶುಂಠಿ ಪೇಸ್ಟ್, ಕತ್ತರಿಸಿದ ಕರಿ ಬೇವು, ಜೀರಿಗೆ, ಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಅದಕ್ಕೆ ತಣ್ಣಗಾದ ಮೊಳಕೆ ಕಾಳು-ಆಪಲ್ ಟೊಮೆಟೊ, ಹೆಚ್ಚಿದ ಸೌತೆಕಾಯಿ, ಈರುಳ್ಳಿ ಸೇರಿಸಿ ಸ್ವಲ್ಪ ನಿಂಬೆರಸ ಸೇರಿಸಿ ಚೆನ್ನಾಗಿ ತಿರುಗಿಸಿ. ಈಗ ಸಲಾಡ್ ಮಿಶ್ರಣವನ್ನು ಸರ್ವಿಂಗ್ ಬೌಲ್ ಗೆ ಹಾಕಿ ಅದರ ಮೇಲೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸ್ಪ್ರೌಟ್ಸ್ ಸಲಾಡ್ ತಿನ್ನಲು ರೆಡಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...