ಮೈಸೂರು: ರಾಜ್ಯ ರಾಜಕಾರಣದಲ್ಲಿ ಸಧ್ಯ ರೌಡಿ ರಾಜಕೀಯ ಹಾಗೂ ಪಕ್ಷ ಸೇರ್ಪಡೆ ವಿಚಾರ ತಾರಕಕ್ಕೇರಿದ್ದು, ಇಲ್ಲೊಬ್ಬ ರೌಡಿಶೀಟರ್ ಬಿಜೆಪಿಯವರೇ ಟಿಕೆಟ್ ಕೊಡಿ ಎಂದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಮೈಸೂರಿನ ಗಾಂಧಿ ವೃತ್ತದ ಬಳಿ ರೌಡಿ ಶೀಟರ್ ಮಂಜು ಅಲಿಯಾಸ್ ಪಾನಿಪುರಿ ಮಂಜ, ನಾನು ರೌಡಿ ಶೀಟರ್, ನನಗೂ ಟಿಕೆಟ್ ಕೊಡಿ ಎಂದು ಕೈಯಲ್ಲಿ ಬೃಹತ್ ಬ್ಯಾನರ್ ಹಿಡಿದು ನಿಂತು ಬಿಜೆಪಿ ಟಿಕೆಟ್ ಗಾಗಿ ಒತ್ತಾಯಿಸಿದ್ದಾನೆ.
ಬಿಜೆಪಿಯವೇ ನಾನು ರೌಡಿಶೀಟರ್ ಹಾಗಾಗಿ ನನಗೂ ಸ್ಥಾನಮಾನ ಕೊಡಿ, ಎನ್ ಆರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ನನಗೂ ಪಕ್ಷದ ಟಿಕೆಟ್ ಕೊಡಿ ಎಂದು ಬಿಜೆಪಿ ಮೊರೆ ಹೋಗಿದ್ದಾನೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರೌಡಿಶೀಟರ್ ಗಳು ಬಿಜೆಪಿಯತ್ತ ಮುಖ ಮಾಡಿದ್ದು, ಟಿಕೆಟ್ ಗಾಗಿ ನೇರವಾಗಿ ಬೇಡಿಕೆ ಇಟ್ಟಿದ್ದಾರೆ.