ಭಾರತದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ವಿದ್ಯಾರ್ಥಿಗಳಿಗೆ ಕೆಲವೊಂದು ಸಂಸ್ಥೆಗಳಿಂದ ಭರ್ಜರಿ ಸಂಬಳದ ಪ್ಯಾಕೇಜ್ ನಿಡಲಾಗಿದೆ. ಕ್ಯಾಂಪಸ್ ಸೆಲೆಕ್ಷನ್ ಆಯೋಜನೆಗೊಂಡಿದ್ದ ಮೊದಲ ದಿನವೇ ಐಐಟಿ ಕಾನ್ಪುರ, ದೆಹಲಿ, ಬಾಂಬೆ, ರೂರ್ಕಿ, ಮದ್ರಾಸ್ ಮೊದಲಾದವು ಭರ್ಜರಿ ಆಫರ್ ನೀಡಿದೆ. ವಾರ್ಷಿಕ 4 ಕೋಟಿ ರೂ.ವರೆಗಿನ ವೇತನ ಆಫರ್ ಇದಾಗಿದೆ !
ಇದುವರೆಗೂ ಭಾರತೀಯ ಐಐಟಿ ವಿದ್ಯಾರ್ಥಿಗಳಿಗೆ ನೀಡಲಾದ ಅತಿ ಹೆಚ್ಚಿನ ವೇತನ ಆಫರ್ ಇದಾಗಿದ್ದು, ಸದ್ಯ ಐಐಟಿಯ ಮೂವರು ವಿದ್ಯಾರ್ಥಿಗಳಿಗೆ ಈ ಆಫರ್ ಸಿಕ್ಕಿದೆ. ಐಐಟಿ ಕಾನ್ಪುರ, ದೆಹಲಿ ಹಾಗೂ ಬಾಂಬೆಯ ತಲಾ ಒಬ್ಬ ವಿದ್ಯಾರ್ಥಿಗೆ ಅಮೆರಿಕದ ಜೇನ್‌ಸ್ಟ್ರೀಟ್ ಕಂಪೆನಿ 4 ಕೋಟಿ ರೂ. ವೇತನದ ಪ್ರೀ – ಪ್ಲೇಸ್‌ಮೆಂಟ್ ಆಫರ್‌ಗಳನ್ನು ನೀಡಿದೆ.
ಇಷ್ಟೇ ಅಲ್ಲದೇ, ಈ ಬಾರಿ 30 ವಿದ್ಯಾರ್ಥಿಗಳು ವರ್ಷಕ್ಕೆ 1 ಕೋಟಿ ರೂ. ಗೂ ಹೆಚ್ಚು ವೇತನದ ಆಫರ್ ಪಡೆದುಕೊಂಡಿದ್ದಾರೆ. ಐಐಟಿ ಮದ್ರಾಸ್‌ನ ಸುಮಾರು 25 ವಿದ್ಯಾರ್ಥಿಗಳು ಹಾಗೂ ಐಐಟಿ ಗುವಾಹಟಿಯ 5 ವಿದ್ಯಾರ್ಥಿಗಳು 1 ಕೋಟಿ ರೂ. ಆಫರ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಅದೇ ಇನ್ನೊಂದೆಡೆ, ಐಐಟಿ ಮದ್ರಾಸ್ ಸುಮಾರು 333 ವಿದ್ಯಾರ್ಥಿಗಳಿಗೆ ಉದ್ಯೋಗಗಳಿಗೆ ಹಾಜರಾಗುವ ಆಫರ್‌ಗಳನ್ನು ನೀಡಲಾಗಿದೆ. ಐಐಟಿ ರೂರ್ಕಿಯು ಅಂತರರಾಷ್ಟ್ರೀಯ ಪೊಸಿಷನ್‌ಗಳಿಗೆ ರೂ. 1.6 ಕೋಟಿ ಮತ್ತು ದೇಶೀಯ ಮಟ್ಟದ ಹುದ್ದೆಗೆ ರೂ. 1.3 ಕೋಟಿ ಆಫರ್ ಮಾಡಿದೆ ಮತ್ತು ಒಟ್ಟು 6 ವಿದ್ಯಾರ್ಥಿಗಳನ್ನು ಇದೇ ಡಿಸೆಂಬರ್ 1ರಿಂದ ಪ್ಲೇಸ್‌ಮೆಂಟ್ ನೀಡಲಾಗಿದೆ.