VIRAL VIDEO| ಕಳ್ಳತನ ಮಾಡಿದ್ರೆ ಸಿಗುತ್ತಿತ್ತಂತೆ ನೆಮ್ಮದಿ; ಪ್ರಾಮಾಣಿಕವಾಗಿ ಒಪ್ಪಿಕೊಂಡ ಕಳ್ಳ 03-12-2022 11:27AM IST / No Comments / Posted In: Latest News, India, Live News ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋ ಒಂದು ನೋಡುಗರಿಗಿರಲಿ, ಕಳ್ಳನನ್ನು ವಿಚಾರಣೆ ಮಾಡುತ್ತಿದ್ದ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳಿಗೇ ನಗು ತರಿಸಿದೆ. ಅಷ್ಟಕ್ಕೂ ಆ ಕಳ್ಳ ಹೇಳಿದ್ದೇನು ಅಂತೀರಾ ? ನೀವೇ ಈ ಸುದ್ದಿ ಓದಿ. ಛತ್ತೀಸ್ಗಡದ ದುರ್ಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಜಿಲ್ಲಾ ರಕ್ಷಣಾಧಿಕಾರಿ ಡಾ. ಅಭಿಷೇಕ್ ಪಲ್ಲವ ಕಳ್ಳನೊಬ್ಬನ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಕಳ್ಳತನ ಯಾಕೆ ಮಾಡುತ್ತಿದ್ದೆ ಎಂದು ಪ್ರಶ್ನಿಸಿದಾಗ ಅದರಿಂದ ನನಗೆ ನೆಮ್ಮದಿ ಸಿಗುತ್ತಿತ್ತು ಎಂದಿದ್ದಾನೆ. ಅವನ ಈ ಉತ್ತರವನ್ನು ಕೇಳಿ ಎಲ್ಲರೂ ಗೊಳ್ ಎಂದು ನಕ್ಕಿದ್ದಾರೆ. ಅಷ್ಟೇ ಅಲ್ಲ, ಕಳ್ಳತನ ಮಾಡಿದ ಬಳಿಕ ನನಗೆ ಪಶ್ಚಾತಾಪವಾಗುತ್ತಿತ್ತು ಎಂದು ಹೇಳಿರುವ ಆತ, ಕಳ್ಳತನದಿಂದ ಬಂದ ಹಣದಲ್ಲಿ ಹಸುಗಳಿಗೆ, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದೆ. ಅಲ್ಲದೆ ನಿರ್ಗತಿಕರಿಗೆ ಚಳಿಯಾಗಬಾರದೆಂದು ಬೆಡ್ ಶೀಟ್ ನೀಡಿದ್ದೇನೆ ಎಂದಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಈತ ಆಧುನಿಕ ರಾಬಿನ್ ಹುಡ್ ಎಂದರೆ, ಮತ್ತಷ್ಟು ಮಂದಿ ಕ್ರಾಂತಿಕಾರಿ ಕಳ್ಳ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಪತ್ರಕರ್ತ ಶುಭಾಂಕರ್ ಮಿಶ್ರಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. चोरी करके अच्छा लगा..लेकिन बाद में पछतावा हुआ 😁 pic.twitter.com/b5bqFHDViG — Shubhankar Mishra (@shubhankrmishra) December 2, 2022