ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರಿಸಲಾಗಿದೆ.
ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸುಂದರ್ ಪಿಚೈಯವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ ಮಾಡಿದ್ದು, ಸುಂದರ್ ಅವರ ಪರಿಶ್ರಮ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಅವರಿಗೆ ಪದ್ಮಭೂಷಣ ಹಸ್ತಾಂತರಿಸಲು ಸಂತೋಷವಾಗಿದೆ ಎಂದು ಹೇಳಿದ್ದಾರೆ
‘ನಾನು ಎಲ್ಲಿಗೆ ಹೋದರೂ ಭಾರತವನ್ನು ನನ್ನೊಂದಿಗೆ ಒಯ್ಯುತ್ತೇನೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಗೂಗಲ್ ಸಿಇಒ ಅವರು ಟ್ರೇಡ್ ಮತ್ತು ಇಂಡಸ್ಟ್ರಿ ವಿಭಾಗದಲ್ಲಿ 2022 ರ ಪ್ರತಿಷ್ಠಿತ ಪದ್ಮಭೂಷಣವನ್ನು ಪಡೆದರು. ಪದ್ಮಭೂಷಣ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಮಧುರೈ ಮೂಲದ ಪಿಚೈ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಹಸ್ತಾಂತರಿಸಲು ಸಂತೋಷವಾಗಿದೆ. ಮಧುರೈನಿಂದ ಮೌಂಟೇನ್ ವ್ಯೂಗೆ ಅವರ ಸ್ಪೂರ್ತಿದಾಯಕ ಪ್ರಯಾಣ, ಭಾರತ-ಅಮೆರಿಕಾ ಆರ್ಥಿಕ ಮತ್ತು ತಂತ್ರಜ್ಞಾನವನ್ನು ಬಲಪಡಿಸುತ್ತದೆ. ಸಂಬಂಧಗಳು, ಜಾಗತಿಕ ನಾವೀನ್ಯತೆಗೆ ಭಾರತೀಯ ಪ್ರತಿಭೆಗಳ ಕೊಡುಗೆಯನ್ನು ಪುನರುಚ್ಚರಿಸುತ್ತದೆ ಎಂದು ರಾಯಭಾರಿ ತರಂಜಿತ್ ಎಸ್ ಸಂಧು ತಿಳಿಸಿದ್ದಾರೆ.