ಸ್ಯಾಮ್ಸಂಗ್ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಾ ಇದೆ. ಆಯ್ದ ಉತ್ಪನ್ನಗಳ ಮೇಲೆ 20 ವರ್ಷಗಳ ವಾರಂಟಿಯನ್ನು ಕೊಡ್ತಿದೆ. ಈ ವಾರಂಟಿ ಕೊಡುಗೆಯೊಂದಿಗೆ ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಈ 20 ವರ್ಷಗಳಲ್ಲಿ ಕಂಪನಿಯ ಈ ಉತ್ಪನ್ನಗಳಲ್ಲಿ ಯಾವುದೇ ದೋಷವಿದ್ದರೆ, ಅದನ್ನು ಸರಿಪಡಿಸುವುದು ಸ್ಯಾಮ್ಸಂಗ್‌ನ ಜವಾಬ್ದಾರಿಯಾಗಿದೆ. ಇದಕ್ಕೆ ಪ್ರತಿಯಾಗಿ ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಇದೇ ಕಾರಣಕ್ಕೆ ಕಂಪನಿಯ ಈ ಆಫರ್ ತುಂಬಾ ವಿಶೇಷವಾಗಿದೆ. ಇದರಲ್ಲಿ ಗ್ರಾಹಕರಿಗೆ ಲಾಭ ಸಿಗಲಿದೆ.
ಸ್ಯಾಮ್‌ಸಂಗ್ ಕಂಪನಿಯು ವಾಷಿಂಗ್ ಮೆಷಿನ್‌ಗಳಲ್ಲಿ ಬಳಸುವ ಡಿಜಿಟಲ್ ಇನ್ವರ್ಟರ್ ಮೋಟಾರ್ ಮತ್ತು ರೆಫ್ರಿಜರೇಟರ್‌ಗಳಲ್ಲಿ ಬಳಸುವ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್‌ನಲ್ಲಿ ಮೊದಲ ಬಾರಿಗೆ 20 ವರ್ಷಗಳ ವಾರಂಟಿಯನ್ನು ನೀಡುತ್ತಿದೆ. ವಾರಂಟಿ ಇರುವುದರಿಂದ ಗ್ರಾಹಕರ ಜೇಬಿನ ಮೇಲಿನ ಹೊರೆ ಕಡಿಮೆಯಾಗುತ್ತದೆ. ಈ 20 ವರ್ಷಗಳಲ್ಲಿ ಉತ್ಪನ್ನಗಳಲ್ಲಿ ಯಾವುದೇ ರೀತಿಯ ದೋಷವಿದ್ದರೆ ಕಂಪನಿಯು ತನ್ನ ಸ್ವಂತ ಖರ್ಚಿನಲ್ಲಿ ಅದನ್ನು ಸರಿಪಡಿಸುತ್ತದೆ. 20 ವರ್ಷಗಳ ವಾರಂಟಿ ಯೋಜನೆಯನ್ನು ಇನ್ನಷ್ಟು ಉತ್ಪನ್ನಗಳಿಗೆ ವಿಸ್ತರಿಸಬಹುದಿತ್ತು ಎನ್ನುತ್ತಿದ್ದಾರೆ ಗ್ರಾಹಕರು.