ಚಿತ್ರದುರ್ಗ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿಗೆ ಚಿತ್ರದುರ್ಗ ಬಾಲನ್ಯಾಯ ಮಂಡಳಿ ಜಾಮೀನು ಮಂಜೂರು ಮಾಡಿದೆ.
ಪೋಕ್ಸೋ ಪ್ರಕರಣದ ಎ3 ಆರೋಪಿ ಮುರುಘಾಮಠದ ಉತ್ತರಾಧಿಕಾರಿಯೂ ಆಗಿದ್ದು, ಈತ ಪೋಕ್ಸೋ ಕೇಸ್ ನ ಎರಡೂ ಪ್ರಕರಣದಲ್ಲಿಯೂ ಮೂರನೇ ಆರೋಪಿಯಾಗಿದ್ದಾನೆ. ಮುರುಘಾಶ್ರೀಗಳ ವಿರುದ್ಧದ ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾಮೀನು ಪಡೆದಿರುವ ಆರೋಪಿ, ಎರಡನೇ ಪ್ರಕರಣದಲ್ಲಿಯೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ.
ಇಂದು ಚಿತ್ರದುರ್ಗದ ಬಾಲನ್ಯಾಯ ಮಂಡಳಿ ಮುಂದೆ ಎ3 ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಬಾಲ ನ್ಯಾಯ ಮಂಡಳಿ ಎ3 ಆರೋಪಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿದೆ.