alex Certify WATCH | ವೃದ್ಧನ ಆಸೆ ಈಡೇರಿಸಲು ಮನೆಯನ್ನೇ ಹೊತ್ತುಕೊಂಡು ಹೋದ ಗ್ರಾಮಸ್ಥರು: ಇದರ ಹಿಂದಿದೆ ಮನಕಲಕುವ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH | ವೃದ್ಧನ ಆಸೆ ಈಡೇರಿಸಲು ಮನೆಯನ್ನೇ ಹೊತ್ತುಕೊಂಡು ಹೋದ ಗ್ರಾಮಸ್ಥರು: ಇದರ ಹಿಂದಿದೆ ಮನಕಲಕುವ ಕಾರಣ

ಮಾನವೀಯತೆ ಸತ್ತೇ ಹೋಗಿದೆ ಎಂದು ಈಗ ಹೇಳುವುದು ಮಾಮೂಲಾಗಿದೆ. ಅಂಥದ್ದರಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ತೋರಿಸುತ್ತದೆ.

20ಕ್ಕೂ ಅಧಿಕ ಮಂದಿ ಸೇರಿಕೊಂಡು ವಯಸ್ಸಾದ ವ್ಯಕ್ತಿಯ ಸಂಪೂರ್ಣ ಮನೆಯನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಇದಾಗಿದೆ. ಗುಡ್ ನ್ಯೂಸ್ ಮೂವ್‌ಮೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ.

20ಕ್ಕೂ ಅಧಿಕ ಮಂದಿ ಫಿಲಿಪ್ಪೀನ್ಸ್​ನ ಜಾಂಬೊಂಗಾ ಡೆಲ್ ನಾರ್ಟೆಯಲ್ಲಿ ಕಚ್ಚಾ ರಸ್ತೆಯ ಉದ್ದಕ್ಕೂ 7 ಅಡಿ ಎತ್ತರದ ಮನೆಯನ್ನು ಸಾಗಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಯಸ್ಸಾದ ಈ ವೃದ್ಧ ತನ್ನ ಸಾಯುವ ವಯಸ್ಸಿನಲ್ಲಿ ತನ್ನ ಮಗ ಮತ್ತು ಮೊಮ್ಮಕ್ಕಳಿಗೆ ಹತ್ತಿರವಾಗಲು ಇರಲು ಬಯಸಿದ್ದರಿಂದ ಈ ರೀತಿ ಸಹಾಯ ಮಾಡಲಾಗಿದೆ.

ಇಡೀ ಮನೆಯನ್ನು ಸಾಗಿಸಲು ಜನರು ಎರಡು ಗಂಟೆಗಳನ್ನು ತೆಗೆದುಕೊಂಡರು. ಇದರ ವೈರಲ್​ ವಿಡಿಯೋಗೆ ಜನರು ಭಾವುಕರಾಗಿದ್ದು, ಕಮೆಂಟ್​ಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...