ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆಯಲ್ಲಿ ಸಿಲುಕಿದ್ದ ಎರಡು ಅಪರೂಪದ ಡಾಲ್ಫಿನ್ಗಳನ್ನು ಜೀವಂತವಾಗಿ ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ಮೀನುಗಾರರು ಬಿಟ್ಟಿದ್ದು, ಎಲ್ಲೆಡೆ ಶ್ಲಾಘನೆಗಳ ಸುರಿಮಳೆಯಾಗಿದೆ.
ಇದರ ವಿಡಿಯೋ ವೈರಲ್ ಆಗಿದ್ದು, ಮೀನುಗಾರರ ಕ್ರಮಕ್ಕೆ ಅರಣ್ಯ ಇಲಾಖೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಮನಾಥಪುರಂ ಜಿಲ್ಲೆಯ ಮಂಡಪಂ, ಪಂಬನ್, ಉಚ್ಚಿಪುಳ್ಳಿ, ಸೆರಂಗೊಟ್ಟೆ, ಧನುಷ್ಕೋಡಿ ಮತ್ತಿತರ ಪ್ರದೇಶಗಳಲ್ಲಿ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದರು.
ಈ ವೇಳೆ ರಾಮನಾಥಪುರದ ಸಮುದ್ರದಲ್ಲಿ ಮೀನುಗಾರರು ಬಲೆ ಬೀಸಿದಾಗ ಮನ್ನಾರ್ ಕೊಲ್ಲಿಯಲ್ಲಿ ವಾಸಿಸುವ ಅಪರೂಪದ ಎರಡು ಡಾಲ್ಫಿನ್ ಬಲೆಗೆ ಸಿಕ್ಕಿಬಿದ್ದಿವೆ. ಇವು ಅಪರೂಪದ ಜಾತಿಗಳು ಎಂದು ತಿಳಿದ ತಕ್ಷಣ ಮೀನುಗಾರರು ಬಲೆಯಲ್ಲಿದ್ದ ಇತರೆ ಮೀನುಗಳನ್ನು ಬೇರ್ಪಡಿಸಿ ಜೀವಂತವಾಗಿ ಸಿಲುಕಿದ್ದ ಡಾಲ್ಫಿನ್ಗಳನ್ನು ರಕ್ಷಿಸಿದ್ದಾರೆ.
ಅವುಗಳಣ್ನು ತಕ್ಷಣ ಸಮುದ್ರಕ್ಕೆ ಬಿಡಲಾಯಿತು. ಪ್ರದೇಶದ ಮೀನುಗಾರರು ಘಟನೆಯ ವಿಡಿಯೋ ತೆಗೆದಿದ್ದು, ಅದೀಗ ವೈರಲ್ ಆಗುತ್ತಿದೆ. ವೀಡಿಯೊವನ್ನು ತೆಗೆದುಕೊಂಡರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜಾಗೃತಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.