ಹಸಿವೋ, ಅಸಹಾಯಕತೆಯೋ, ಸಂಕಟವೋ, ಹೇಳಿಕೊಳ್ಳಲೂ ಸಾಧ್ಯವಾಗದ ತೊಳಲಾಟ…… ದಿಕ್ಕೆಟ್ಟು ಕಂಗಾಲಾದ ಬಾಲಕಿ ಏಕಾಏಕಿ ರಸ್ತೆ ಬದಿ ಕಣ್ಣೀರಿಡುತ್ತಿರುವ ದೃಶ್ಯ…… ಎಂತಹ ಕಲ್ಲು ಮನಸ್ಸಿನವರ ಕರುಳನ್ನು ಹಿಂಡುವಂತೆ ಮಾಡುತ್ತೆ ಈ ವಿಡಿಯೋ.
ರಸ್ತೆಬದಿ ಪುಟ್ಟ ಬಾಲಕಿಯರು ಹೊತ್ತಿನ ಊಟಕ್ಕಾಗಿ ಪರದಾತ್ತಿರುವ, ಅಸಹಾಯಕತೆಯ ಸಂಕಟ ತಾಳಲಾರದೇ ಇನ್ನೋರ್ವ ಬಾಲಕಿ ಅಳುತ್ತಿರುವ, ಮತ್ತೊಂದೆಡೆ ಕಸರತ್ತು ಮಾಡುತ್ತಿದ್ದ ಮತ್ತೋರ್ವ ಬಾಲಕಿ. ಕಣ್ಣೀರಿಡುತ್ತಿರುವ ಬಾಲಕಿ ಡೋಲು ಬಡಿಯುತ್ತಿದ್ದರೆ ಅತ್ತ ಬದಿಯಲ್ಲಿರುವ ಪುಟ್ಟ ಬಾಲೆ ಕಸರತ್ತು ಮಾಡುತ್ತಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಈ ಪುಟ್ಟ ಬಾಲಕಿಯರು ನಿಮ್ಮ ಕಣ್ಣಿಗೆ ಬಿದ್ದರೆ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆಯಿರಿ ಎಂದು ವಿಡಿಯೋ ನೋಡಿದವರು ಮನವಿ ಮಾಡುತ್ತಿದ್ದಾರೆ.