ಈಗ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದ್ದು, ಸಹಸ್ರಾರು ಭಕ್ತರು ಪ್ರತಿನಿತ್ಯ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಅವರುಗಳು ಮಾಡಬಾರದ ಕೆಲಸಗಳೇನು ಎಂಬುದನ್ನು ಅಯ್ಯಪ್ಪ ಸ್ವಾಮಿ ದೇಗುಲದ ಆಡಳಿತ ಮಂಡಳಿ ವಿವರಿಸಿದೆ.
ದೇವಾಲಯದ ಪರಿಸರದಲ್ಲಿ ಮೊಬೈಲ್ ಫೋನ್ ಬಳಸಬೇಡಿ.
ಪಂಬ, ಸನ್ನಿಧಾನ ಹಾಗೂ ಕಾಡುದಾರಿ ಸೇರಿದಂತೆ ಎಲ್ಲಿಯೂ ಸಿಗರೇಟು, ಬೀಡಿ ಸೇದಬೇಡಿರಿ.
ಮದ್ಯವನ್ನೂ ಉತ್ತೇಜಕ ಔಷಧಿಗಳನ್ನೂ ಸೇವಿಸಬೇಡಿರಿ.
ಕ್ಯೂವನ್ನು ಮೀರಿ ಹೋಗಲು ಪ್ರಯತ್ನಿಸಬೇಡಿರಿ.
ಸರದಿ ಸಾಲಿನಲ್ಲಿ ನಿಂತಿರುವಾಗ ಒತ್ತಡ ಹಾಕಬೇಡಿರಿ.
ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸಬೇಡಿರಿ.
ಅನಧಿಕೃತವಾದ ಮಾರಾಟಗಾರರನ್ನು ಪ್ರೋತ್ಸಾಹಿಸಬೇಡಿರಿ.
ತೆರೆದ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬೇಡಿರಿ.
ಯಾವುದೇ ಸೇವೆಗೆ ಹೆಚ್ಚುವರಿ ಪಾವತಿ ಮಾಡಬೇಡಿರಿ.
ಯಾವುದೇ ಸಹಾಯಕ್ಕಾಗಿ ಪೋಲೀಸರನ್ನು ಸಂಪರ್ಕಿಸಲು ಹಿಂದೇಟು ಹಾಕಬೇಡಿರಿ.
ತ್ಯಾಜ್ಯಗಳನ್ನು ತ್ಯಾಜ್ಯ ತೊಟ್ಟಿಗಳಲ್ಲದೆ ಬೇರೆಲ್ಲಿಯೂ ಎಸೆಯಬೇಡಿರಿ.
ಪದಿನೆಟ್ಟಾಂ ಪಡಿಯಲ್ಲಿ ತೆಂಗಿನ ಕಾಯಿ ಒಡೆಯಬೇಡಿರಿ.
ಪದಿನೆಟ್ಟಾಂ ಪಡಿಯ ಎರಡೂ ಬದಿಗಳಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ತೆಂಗಿನಕಾಯಿಯನ್ನು ಒಡೆಯಬೇಡಿರಿ.
ಪದಿನೆಟ್ಟಾಂ ಪಡಿಯನ್ನು ಏರುವಾಗ ಮಂಡಿಯೂರಬೇಡಿರಿ.
ಮರುಪಯಣದಲ್ಲಿ ನಡಪ್ಪಂದಲ್ ಫ್ಲೈಓವರ್ ಹೊರತುಪಡಿಸಿ ಬೇರಾವ ಮಾರ್ಗವನ್ನೂ ಬಳಸಬೇಡಿರಿ.
ಸನ್ನಿಧಾನದ ಅಂಗಣದಲ್ಲಿಯೋ ತಂತ್ರಿ ನಡೆಯಲ್ಲಿಯೋ ವಿಶ್ರಾಂತಿ ಪಡೆಯಬೇಡಿರಿ.
ವಿರಿ ಇಡುವ ಸ್ಥಳಗಳಾದ ನಡಪ್ಪಂದಲ್ ಮತ್ತು ಕೆಳಗಿನ ಪ್ರಾಂಗಣವನ್ನು ನಡೆಯುವ ದಾರಿಯಾಗಿ ಬಳಸಬೇಡಿರಿ.
ಪಟಾಕಿಗಳನ್ನು ನಿಷೇಧಿಸಲಾಗಿದೆ.
ಶಸ್ತ್ರಾಸ್ತ್ರಗಳನ್ನು ಒಯ್ಯಲು ಅನುಮತಿ ಇಲ್ಲ.
ಅಡುಗೆ ಅನಿಲ, ಸ್ಟೌ ಇವುಗಳನ್ನು ಸನ್ನಿಧಾನದಲ್ಲಿ ಉಪಯೋಗಿಸುವಂತಿಲ್ಲ.