ಬೆಂಗಳೂರು: ಶಾಂತಿನಗರದ ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನಗಳ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ 30.26 ಲಕ್ಷ ರೂಪಾಯಿ ರಾಜಸ್ವ ಸಂಗ್ರಹವಾಗಿದೆ.
ಕೆಎ01 MZ ಮುಂಗಡ ನೋಂದಣಿ ಶ್ರೇಣಿ ಆರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸಲಾಗಿದೆ. 26 ನೋಂದಣಿ ಸಂಖ್ಯೆಗಳಿಂದ ಅರ್ಜಿ ಶುಲ್ಕ ಸೇರಿದಂತೆ ಸರ್ಕಾರಕ್ಕೆ 30.26 ಲಕ್ಷ ರೂಪಾಯಿ ರಾಜಸ್ವ ಸಂಗ್ರಹವಾಗಿದೆ.
ಫ್ಯಾನ್ಸಿ ನಂಬರ್ ಗಳ ಪೈಕಿ KA01 MZ 9999 ನೋಂದಣಿ ಸಂಖ್ಯೆ 3.30 ಲಕ್ಷ ರೂ. ಬಿಡ್ ಮೊತ್ತಕ್ಕೆ ಹರಾಜಾಗಿದೆ.
KA01 MZ 001 ನೋಂದಣಿ ಸಂಖ್ಯೆಗೆ 1.30 ಲಕ್ಷ ರೂ., KA01 MZ 005 ನೋಂದಣಿ ಸಂಖ್ಯೆಗೆ 52 ಸಾವಿರ ರೂ., KA01 MZ 009 ನೋಂದಣಿ ಸಂಖ್ಯೆಗೆ 2 ಲಕ್ಷ ರೂ., KA01 MZ 0099 80,000 ರೂ., KA01 MZ 999 ನೋಂದಣಿ ಸಂಖ್ಯೆಗೆ 1.80 ಲಕ್ಷ ರೂ. ಬಿಡ್ ಮೊತ್ತಕ್ಕೆ ಹರಾಜು ಮಾಡಲಾಗಿದೆ.