ಭರ್ಜರಿ ರೋಡ್ ಶೋ ನಡುವೆ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ 01-12-2022 7:53PM IST / No Comments / Posted In: Latest News, India, Live News ಚುನಾವಣಾ ಪ್ರಯುಕ್ತ ಪಿಎಂ ನರೇಂದ್ರ ಮೋದಿ ಗುಜರಾತ್‌ನಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಬರ್ತಿದ್ದಾರೆ ಅಂದ್ರೆ ಅಲ್ಲಿ ಜನ ಜಾತ್ರೆಯೇ ಸೇರಿರುತ್ತೆ. ಜನರು ತುಂಬಿರೋ ರಸ್ತೆಗಳಲ್ಲಿ ವಾಹನಗಳು ಓಡಾಡೋದಿರಲಿ, ಮನುಷ್ಯರು ಕೂಡಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡೋದಕ್ಕೆ ಪರದಾಡ್ತಿದ್ದಾರೆ. ಇದೇ ಸಮಯದಲ್ಲಿ ಅಲ್ಲಿ ಬಂದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಹಿಂದೆಯೂ ಮೋದಿ ಪ್ರಚಾರದ ಕಾರ್ಯದಲ್ಲಿ ಇದ್ದಾಗ ಆಂಬುಲೆನ್ಸ್‌ಗೆ ಅಂತಾನೇ ದಾರಿ ಮಾಡಿಕೊಟ್ಟಿರೋದು ಈ ಸಂದರ್ಭದಲ್ಲಿ ನೆನಪಾಗುತ್ತೆ. ಸಹಾಯ ಹಾಗೂ ಸಮಸ್ಯೆಗೆ ಸ್ಪಂದಿಸುವಲ್ಲಿ ಪ್ರಧಾನಿ ಮೋದಿ ಯಾವತ್ತು ಹಿಂದೆ ಬಿದ್ದಿಲ್ಲ. ಈಗ ಗುಜರಾತ್‌ನಲ್ಲಿ ಘಟನೆ ಅದು ಸತ್ಯ ಅನ್ನೋದಕ್ಕೆ ಸಾಕ್ಷಿಯಾಗಿದೆ. 30 ಡಿಸೆಂಬರ್ ರಂದು ಕೂಡಾ ಅಹಮದಾಬಾದ್‌ನ ಗಾಂಧಿನಗರದಲ್ಲಿ ಪಿಎಂ ಮೋದಿ ಆಂಬುಲೆನ್ಸ್‌ಗಾಗಿಯೇ ತಮ್ಮ ವಾಹನವನ್ನ ನಿಲ್ಲಿಸಿ ಅದಕ್ಕೆ ದಾರಿ ಮಾಡಿಕೊಟ್ಟಿದ್ದರು. ಈಗಾಗಲೇ ಗುಜರಾತ್‌ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು. ಅಲ್ಲಿ ಖುದ್ದು ಪ್ರಧಾನಿ ಹೋಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮ ಪಡುತ್ತಿದ್ದಾರೆ. ಈ ಸಮಯದಲ್ಲಿ ತಮ್ಮಿಂದ ಯಾರಿಗೂ ಸಮಸ್ಯೆ ಉಂಟಾಗಬಾರದು ಅನ್ನೋ ನಿಟ್ಟಿನಲ್ಲಿ ಅವರು ಆದಷ್ಟು ಪ್ರಯತ್ನ ಪಡುತ್ತಿದ್ದಾರೆ. #WATCH | Prime Minister Narendra Modi stopped his convoy to give way to an ambulance during his massive roadshow in Gujarat's Ahmedabad. (Source: DD) pic.twitter.com/3GJBuCDqFN — ANI (@ANI) December 1, 2022