ನಿಮ್ಮ ಆದಾಯವು, ಇನ್‌ಕಮ್ ಟ್ಯಾಕ್ಸ್ ವ್ಯಾಪ್ತಿಗೆ ಬರದಿದ್ದರೂ ನೀವು ಆದಾಯ ತೆರಿಗೆಯನ್ನು ಪಾವತಿಸಬೇಕು. ಐಟಿಆರ್ ಅನ್ನು ಸಲ್ಲಿಸುವುದು ಕಡ್ಡಾಯವಲ್ಲ, ಆದರೆ ಅದರಿಂದ ಅನೇಕ ಪ್ರಯೋಜನಗಳು ಸಿಗುತ್ತವೆ. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಮಿತಿಯು 3 ಲಕ್ಷ ರೂಪಾಯಿ ಆಗಿದ್ದರೆ, ಸೂಪರ್ ಸೀನಿಯರ್ ಸಿಟಿಜನ್ಸ್ ಅಂದರೆ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಮಿತಿಯು 5 ಲಕ್ಷ ರೂಪಾಯಿ ಇದೆ. ಆದರೆ ನಿಮ್ಮ ಸಂಬಳವು ಆದಾಯ ತೆರಿಗೆ ಮಿತಿಗಿಂತ ಕಡಿಮೆಯಿದ್ದರೂ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕು.
1. ಸಾಲದ ಅರ್ಹತೆ ನಿಗದಿ
ನೀವು ಸಾಲ ತೆಗೆದುಕೊಳ್ಳಲು ಹೋದರೆ, ಬ್ಯಾಂಕ್ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತದೆ. ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರೆ ಆ ದಾಖಲೆ ನಿಮಗೆ ಅನುಕೂಲ ಮಾಡಿಕೊಡುತ್ತದೆ. ಬ್ಯಾಂಕ್ ನಿಮಗೆ ನೀಡುವ ಸಾಲದ ಮೊತ್ತವು ಆದಾಯ ತೆರಿಗೆ ರಿಟರ್ನ್‌ನಲ್ಲಿ ನೀವು ಸಲ್ಲಿಸಿದ ನಿಮ್ಮ ಆದಾಯದ ಮೊತ್ತವನ್ನು ಅವಲಂಬಿಸಿರುತ್ತದೆ. ವಾಸ್ತವವಾಗಿ ITR ಎನ್ನುವುದು ಎಲ್ಲಾ ಬ್ಯಾಂಕುಗಳು ಸಾಲಗಳ ಸುಲಭ ಪ್ರಕ್ರಿಯೆಗೆ ಬಳಸುವ ದಾಖಲೆಯಾಗಿದೆ. ಸಾಮಾನ್ಯವಾಗಿ ಬ್ಯಾಂಕುಗಳು ಸಾಲ ನೀಡುವ ಪ್ರಕ್ರಿಯೆಯಲ್ಲಿ ಗ್ರಾಹಕರಿಂದ 3 ITR ಗಳನ್ನು ಕೇಳುತ್ತವೆ. ನೀವು ಗೃಹ ಸಾಲ ತೆಗೆದುಕೊಂಡು ಮನೆ ಖರೀದಿಸಲು ಬಯಸಿದರೆ ಅಥವಾ ವಾಹನ ಸಾಲ ಬೇಕಾದರೆ, ಪರ್ಸನಲ್ ಲೋನ್‌ಗೆ ಪ್ರಯತ್ನಿಸ್ತಾ ಇದ್ರೆ ITR ಅನ್ನು ಸಲ್ಲಿಸಿದ್ರೆ ಸುಲಭವಾಗಿ ಸಿಗುತ್ತದೆ.
2. ತೆರಿಗೆ ಮರುಪಾವತಿಗೆ ಅಗತ್ಯ
ಡಿವಿಡೆಂಡ್ ಆದಾಯದ ಮೇಲೆ ತೆರಿಗೆಯನ್ನು ಸಹ ಉಳಿಸಬಹುದು. ಆದ್ದರಿಂದ ಐಟಿಆರ್ ಸಲ್ಲಿಸಿದರೆ ಟರ್ಮ್ ಡೆಪಾಸಿಟ್‌ಗಳಂತಹ ಉಳಿತಾಯ ಯೋಜನೆಗಳಲ್ಲಿ ಗಳಿಸಿದ ಬಡ್ಡಿಯ ಮೇಲೆ ನೀವು ತೆರಿಗೆಯನ್ನು ಉಳಿಸಬಹುದು. ನೀವು ITR ಮರುಪಾವತಿಯ ಮೂಲಕ ತೆರಿಗೆಯನ್ನು ಕ್ಲೈಮ್ ಮಾಡಬಹುದು. ಒಟ್ಟು ಆದಾಯವು ಬಹು ಮೂಲಗಳಿಂದ 2.5 ಲಕ್ಷವನ್ನು ಮೀರಿದರೆ, ನಂತರ ಕಡಿತಗೊಳಿಸಿದ TDS ಅನ್ನು ಮತ್ತೊಮ್ಮೆ ಕ್ಲೈಮ್ ಮಾಡಬಹುದು.
3. ಮಾನ್ಯ ದಾಖಲೆ
ಆದಾಯ ತೆರಿಗೆ ಮೌಲ್ಯಮಾಪನ ಆದೇಶವನ್ನು ಮಾನ್ಯವಾದ ವಿಳಾಸ ಪುರಾವೆಯಾಗಿ ಬಳಸಬಹುದು. ಫಾರ್ಮ್-16 ಅನ್ನು ಕಂಪನಿಯು ಉದ್ಯೋಗಿಗಳಿಗೆ ನೀಡುತ್ತದೆ. ಉದ್ಯೋಗಿಯ ಆದಾಯದ ಪುರಾವೆಯಾಗಿ ITR ಫೈಲಿಂಗ್ ಡಾಕ್ಯುಮೆಂಟ್ ಕಾರ್ಯನಿರ್ವಹಿಸುತ್ತದೆ. ಆಧಾರ್ ಕಾರ್ಡ್‌ಗೂ ಇದನ್ನು ಬಳಸಿಕೊಳ್ಳಬಹುದು.
4. ನಷ್ಟ ತೋರಿಸಲು ಬೇಕು
ತೆರಿಗೆದಾರರಿಗೆ ಯಾವುದೇ ನಷ್ಟವನ್ನು ಕ್ಲೈಮ್ ಮಾಡಲು, ನಿರ್ದಿಷ್ಟ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದು ಅವಶ್ಯಕ. ಈ ನಷ್ಟವು ಬಂಡವಾಳ ಲಾಭ, ವ್ಯಾಪಾರ ಅಥವಾ ವೃತ್ತಿಯ ರೂಪದಲ್ಲಿರಬಹುದು. ಆದಾಯ ತೆರಿಗೆ ನಿಯಮಗಳು ಸಂಬಂಧಿತ ಮೌಲ್ಯಮಾಪನ ವರ್ಷದಲ್ಲಿ ಐಟಿಆರ್ ಅನ್ನು ಸಲ್ಲಿಸುವ ವ್ಯಕ್ತಿಗಳಿಗೆ ಬಂಡವಾಳ ಲಾಭದ ವಿರುದ್ಧ ನಷ್ಟವನ್ನು ಮುಂದಕ್ಕೆ ಸಾಗಿಸಲು ಅನುವು ಮಾಡಿಕೊಡುತ್ತದೆ.
5. ವೀಸಾ ಪ್ರಕ್ರಿಯೆಗೆ ಅಗತ್ಯ
ವೀಸಾ ಪ್ರಕ್ರಿಯೆ ಅಧಿಕಾರಿಗಳು ನಿಮ್ಮ ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಮತ್ತು ಆದಾಯದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆಯುತ್ತಾರೆ. ಇದರಿಂದ ವೀಸಾ ಪಡೆಯಲು ಸುಲಭವಾಗುತ್ತದೆ. ನೀವು ವಿದೇಶಕ್ಕೆ ಹೋಗುತ್ತಿದ್ದರೆ, ಹೆಚ್ಚಿನ ದೇಶಗಳು ಐಟಿಆರ್ ಅನ್ನು ಬಯಸುತ್ತವೆ. ವ್ಯಕ್ತಿಯು ತೆರಿಗೆ ಬದ್ಧ ನಾಗರಿಕ ಎಂಬುದನ್ನು ಇದು ತೋರಿಸುತ್ತದೆ.