ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಮಿತಿ ಮೀರಿದ್ದು, ಬರೋಬ್ಬರಿ 6.5 ಕೊಟಿ ರೂಪಾಯಿ ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕಳೆದ 11 ತಿಂಗಳಲ್ಲಿ 6.5 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹೆಲ್ಮೆಟ್ ಹಾಕದೇ ವಾಹನ ಸಂಚಾರ ಪ್ರಕರಣದಲ್ಲಿ 1 ಕೋಟಿ 75 ಸಾವಿರ ದಂಡ ವಸೂಲಿ ಮಾಡಲಾಗಿದೆ. 37,846 ಪ್ರಕರಣಗಳು ದಾಖಲಾಗಿವೆ.
ಮಧ್ಯಸೇವಿಸಿ ವಾಹನ ಚಲಾವಣೆ ಪ್ರಕರಣದಲ್ಲಿ 83 ಲಕ್ಷದ 63 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಅತಿವೇಗದಲ್ಲಿ ವಾಹನ ಚಲಾವಣೆ, ನೋ ಪಾರ್ಕಿಂಗ್, ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್ ಸಂಬಂಧ ಒಟ್ಟು 43,460 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹುಬ್ಬಳ್ಳಿ ಸಂಚಾರಿ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.