ನಿರುದ್ಯೋಗಿಗಳು ನೀವಾಗಿದ್ದು, ಬ್ಯುಸಿನೆಸ್ ಶುರು ಮಾಡುವ ಆಲೋಚನೆಯಲ್ಲಿದ್ದರೆ ಕಡಿಮೆ ಹೂಡಿಕೆಯಲ್ಲಿ ವ್ಯಾಪಾರ ಶುರು ಮಾಡಬಹುದು. ಬಂಡವಾಳಕ್ಕೆ ಹಣವಿಲ್ಲ ಎನ್ನುವವರು ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ ಸಾಕಾಗುತ್ತದೆ.
ಆಹಾರ ಪದಾರ್ಥಗಳಿಗೆ ಎಂದೂ ಬೇಡಿಕೆ ಕಡಿಮೆಯಾಗುವುದಿಲ್ಲ. ನಗರ ಪ್ರದೇಶದ ಜನರು ಬೆಳಗಿನ ಸಮಯದಲ್ಲಿ ತುಂಬಾ ಬುಸಿಯಿರ್ತಾರೆ. ಬೆಳಗಿನ ಉಪಹಾರ ತಯಾರಿಸಲು ಸಮಯ ಸಿಗುವುದಿಲ್ಲ. ಅಂತವರಿಗೆ ನೀವು ನೆರವಾಗಬಹುದು.
ಬೆಳಗಿನ ಉಪಹಾರದ ವ್ಯಾಪಾರ ಶುರು ಮಾಡಬಹುದು. ಇದಕ್ಕೆ ಹೆಚ್ಚು ಹೂಡಿಕೆ ಬೇಕಾಗುವುದಿಲ್ಲ. ಫುಲ್ ಟೈಂ ಅಥವಾ ಪಾರ್ಟ್ ಟೈಂ ಆಗಿ ನೀವು ಈ ಉದ್ಯೋಗ ಆಯ್ಕೆ ಮಾಡಿಕೊಳ್ಳಬಹುದು.
ಮನೆಯ ಅಂದ ಹೆಚ್ಚಿಸಲು ಹಾಗೂ ಆರೋಗ್ಯದ ದೃಷ್ಟಿಯಿಂದ ಮನೆ ಮುಂದೆ ಹಾಗೂ ಮನೆಯೊಳಗೆ ಸಣ್ಣ ಸಣ್ಣ ಅಲಂಕಾರಿಕ ಹಾಗೂ ಹೂ ಗಿಡಗಳನ್ನು ಜನರು ಇಟ್ಟುಕೊಳ್ಳಲು ಬಯಸ್ತಾರೆ. ಕಡಿಮೆ ಹಣದಲ್ಲಿ ನೀವು ಫ್ಲಾಂಟ್ ನರ್ಸರಿ ಬ್ಯುಸಿನೆಸ್ ಶುರು ಮಾಡಬಹುದು.
ಫಾಸ್ಟ್ ಫುಡ್ ಗೆ ಬೇಡಿಕೆ ಇದ್ದೇ ಇದೆ. ಸರಿಯಾದ ಜಾಗದಲ್ಲಿ ನೀವು ಫಾಸ್ಟ್ ಫುಡ್ ಬ್ಯುಸಿನೆಸ್ ಶುರು ಮಾಡಿದ್ರೆ ಯಶಸ್ವಿಯಾಗೋದು ನಿಶ್ಚಿತ.
ಮೂರು ಸಾವಿರದಿಂದ ಆರು ಸಾವಿರ ಖರ್ಚು ಮಾಡಿ ಶೂ ವಾಶ್ ಲಾಂಡ್ರಿ ಬ್ಯುಸಿನೆಸ್ ಶುರು ಮಾಡಬಹುದು. ಶೂ ವಾಶ್ ಮಾಡಿ ಕ್ಲೀನ್ ಮಾಡಲು ಮಶಿನ್ ಒಂದು ಮಾರುಕಟ್ಟೆಗೆ ಬಂದಿದೆ .ಇದು ಹೊಸ ಬ್ಯುಸಿನೆಸ್. ಇದ್ರ ಜೊತೆ ಫರ್ನಿಚರ್ ಡ್ರೈ ಕ್ಲೀನಿಂಗ್ ಕೂಡ ಶುರು ಮಾಡಬಹುದು.
ಬೇಸಿಗೆಯಲ್ಲಿ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಮಿನರಲ್ ವಾಟರ್ ಗೂ ಬೇಡಿಕೆ ಹೆಚ್ಚಿರುತ್ತದೆ. ಮಿನರಲ್ ವಾಟರ್ ವ್ಯಾಪಾರವನ್ನು 8 ಸಾವಿರದಿಂದ 10 ಸಾವಿರಕ್ಕೆ ಶುರು ಮಾಡಬಹುದು.