alex Certify ʼಕ್ರೆಡಿಟ್‌ ಕಾರ್ಡ್‌ʼ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ರೆಡಿಟ್‌ ಕಾರ್ಡ್‌ʼ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ…..!

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಸಾಕಷ್ಟು ಹೆಚ್ಚಾಗಿದೆ. ಕ್ರೆಡಿಟ್ ಕಾರ್ಡ್‌ಗಳಲ್ಲಿರುವ ಅನೇಕ ಆಫರ್‌ಗಳ ಮೂಲಕ ಬ್ಯಾಂಕ್‌ಗಳು ಕೂಡ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ ಕ್ರೆಡಿಟ್ ಕಾರ್ಡ್‌ಗಳ ಅತಿಯಾದ ಬಳಕೆ ಕ್ರೆಡಿಟ್ ರಿಪೋರ್ಟ್‌ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಈ ಬಗ್ಗೆ ಕೂಡ ನೀವು ಕಾಳಜಿ ವಹಿಸಬೇಕು. ಯಾಕಂದ್ರೆ ಕ್ರೆಡಿಟ್ ಕಾರ್ಡ್‌ನಲ್ಲಿ ನಿಯಮಿತವಾಗಿ ವಹಿವಾಟುಗಳನ್ನು ಮಾಡುತ್ತಿದ್ದರೂ ನಾವು ಪ್ರತಿ ತಿಂಗಳು ನಮ್ಮ ಕ್ರೆಡಿಟ್ ರಿಪೋರ್ಟ್‌ ಅನ್ನು ನಿರ್ಲಕ್ಷಿಸುತ್ತೇವೆ.

ಕ್ರೆಡಿಟ್‌ ರಿಪೋರ್ಟ್‌ ಎಂದರೇನು?

ಕ್ರೆಡಿಟ್ ರಿಪೋರ್ಟ್‌ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ನಿಮ್ಮ ಸಾಲವನ್ನು ಅನುಮೋದಿಸಬೇಕೇ ಅಥವಾ ತಿರಸ್ಕರಿಸಬೇಕೆ ಎಂಬುದನ್ನು ಇದು ನಿರ್ಧರಿಸುತ್ತದೆ. ಹೆಚ್ಚಿನ ಸಾಲಗಳ ಮೇಲಿನ ಬಡ್ಡಿ ದರವನ್ನು ನಿಮ್ಮ ಕ್ರೆಡಿಟ್ ರಿಪೋರ್ಟ್‌ಗೆ ಲಿಂಕ್ ಮಾಡಲಾಗುತ್ತದೆ. ಆದ್ದರಿಂದ ಕ್ರೆಡಿಟ್ ರಿಪೋರ್ಟ್‌ನಲ್ಲಾಗುವ ವ್ಯತ್ಯಾಸವು ನಿಮ್ಮ ಲೋನ್‌ಗೆ ಅಡ್ಡಿಯಾಗಬಹುದು. ಆದ್ದರಿಂದ ನೀವು ನಿಯಮಿತವಾಗಿ ಕ್ರೆಡಿಟ್ ರಿಪೋರ್ಟ್‌ ಅನ್ನು ಪರಿಶೀಲಿಸಬೇಕು.

ಕ್ರೆಡಿಟ್ ರಿಪೋರ್ಟ್‌ನಲ್ಲಿ ನಿಮ್ಮ ಸಾಲದ ಮರುಪಾವತಿ ದಾಖಲೆ, ಕ್ರೆಡಿಟ್ ಕಾರ್ಡ್ ಮರುಪಾವತಿ ಸೇರಿದಂತೆ ಕ್ರೆಡಿಟ್ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಇರುತ್ತದೆ.  ಸಾಲದ ವಿಚಾರಣೆಯ ದಾಖಲೆ, ಕ್ರೆಡಿಟ್ ಕಾರ್ಡ್‌ಗಾಗಿ ವಿಚಾರಣೆಯ ದಾಖಲೆ, ಖಾತೆಗಳ ಸಂಖ್ಯೆ ಮತ್ತು ಪ್ರಕಾರ, ನಿಮ್ಮ ಹೆಸರು, ವಿಳಾಸ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಸ್ವತ್ತುಮರುಸ್ವಾಧೀನ ಅಥವಾ ದಿವಾಳಿತನದಂತಹ ಸಾರ್ವಜನಿಕ ಮಾಹಿತಿಗಳ ಬಗ್ಗೆ ಸಹ ಕಾಳಜಿ ವಹಿಸಬೇಕು. ನಿಮ್ಮ ಹೆಸರಿನಲ್ಲಿರುವ ಲೋನ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಅಥವಾ ಬ್ಯಾಂಕ್ ಖಾತೆಗಳಲ್ಲಾಗುವ ದೋಷಗಳು ಮತ್ತು ವಂಚನೆಗಳನ್ನು ಗುರುತಿಸಲು ಕ್ರೆಡಿಟ್ ರಿಪೋರ್ಟ್‌ ನಿಮಗೆ ಸಹಾಯ ಮಾಡುತ್ತದೆ.

ಕ್ರೆಡಿಟ್ ರಿಪೋರ್ಟ್‌ ಓದುವಾಗ ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ, ಪ್ಯಾನ್ ವಿವರಗಳು ಇತ್ಯಾದಿಗಳನ್ನು ನೀವು ಪರಿಶೀಲಿಸಬೇಕು. ಕ್ರೆಡಿಟ್ ಕಾರ್ಡ್ ರಿಪೋರ್ಟ್‌ನಲ್ಲಿ ಪ್ರಮಾದ ಕಂಡುಬಂದರೆ ಅದನ್ನು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಬೇಕು. ಅದನ್ನು ಸರಿಪಡಿಸುವಂತೆ ಕೇಳಬೇಕು. ವಿವಿಧ ಕ್ರೆಡಿಟ್ ಬ್ಯೂರೋಗಳಿಂದ ಕ್ರೆಡಿಟ್ ವರದಿಗಳನ್ನು ವೀಕ್ಷಿಸಿ, ಪ್ರತಿ ವರದಿಯಲ್ಲಿ ನೀವು ಯಾವುದೇ ವ್ಯತ್ಯಾಸವನ್ನು ಕಂಡುಕೊಂಡರೆ, ಅದನ್ನು ಎಲ್ಲಾ ಸಂಬಂಧಿತ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...