ಕೋತ್ವಾಲಿ (ಉತ್ತರ ಪ್ರದೇಶ): ಒಂದೇ ಮೋಟಾರ್ಸೈಕಲ್ನಲ್ಲಿ ಐವರು ಸವಾರಿ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.
“ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ಜನರು ಮೋಟಾರ್ಸೈಕಲ್ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ದ್ವಿಚಕ್ರವಾಹನದ ನಂಬರ್ ಪ್ಲೇಟ್ ಗೋಚರಿಸಿದ್ದು, ಅದರ ಆಧಾರದ ಮೇಲೆ ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ. ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ ಟ್ರಾಫಿಕ್) ಅಶೋಕ್ ಕುಮಾರ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ 6,500 ರೂ.ಗಳ ಚಲನ್ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು. ಶಾಂತಿ ಕದಡಿದ್ದಕ್ಕಾಗಿ ಪೊಲೀಸರು ಐವರ ವಿರುದ್ಧವೂ ಆರೋಪ ಹೊರಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ದ್ವಿಚಕ್ರವಾಹನ ರಯೀಸ್ ಅಹಮದ್ ಎಂಬುವವರಿಗೆ ಸೇರಿದ್ದಾಗಿದೆ. ಆರೋಪಿಗಳನ್ನು ಆರೀಫ್, ಆಸಿಫ್, ಇರ್ಷಾದ್, ಶಮೀಮ್ ಮತ್ತು ವಾಸಿಂ ಎಂದು ಗುರುತಿಸಲಾಗಿದೆ. ಎಲ್ಲರೂ ಮೊರಾದಾಬಾದ್ನ ಅಸಲಾತ್ಪುರ ಪ್ರದೇಶದ ನಿವಾಸಿಗಳು.