ಮಹಿಳೆಯೊಬ್ಬಳು ತನ್ನ ವಾಹನವನ್ನು ಹ್ಯಾಂಡ್ ಬ್ರೇಕ್ನಲ್ಲಿ ಹಾಕದೆ ಡ್ರೈವಿಂಗ್ ಥ್ರೂ ಉದ್ಯೋಗಿಯೊಂದಿಗೆ ಮಾತನಾಡಲು ತನ್ನ ಕಾರಿನಿಂದ ಇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
“ಕಡಿಮೆ ಸಂಬಳದ ಉದ್ಯೋಗಿಗೆ ಕಿರುಕುಳ ನೀಡಲು ಅವಳು ಕಾರಿನಿಂದ ಜಿಗಿದಿದ್ದಾಳೆ. ಆದರೆ ಅವಳು ತನ್ನ ಕಾರನ್ನು ಪಾರ್ಕ್ ಮೋಡ್ನಲ್ಲಿ ಇರಿಸಲು ಮರೆತಿದ್ದಾಳೆ. ಇದನ್ನೇ ನಾವು ಕರ್ಮ ಎನ್ನುತ್ತೇವೆ ಎಂದು ಟ್ವಿಟರ್ ಬಳಕೆದಾರ ಶೀರ್ಷಿಕೆ ನೀಡಿದ್ದಾನೆ.
ಸಿಬ್ಬಂದಿಯೊಂದಿಗೆ ಮಹಿಳೆಯ ವಾಗ್ವಾದದ ನಂತರ ಡ್ರೈವ್ ಥ್ರೂನಲ್ಲಿ ಕಾರು ನಿರ್ಗಮಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಾಹನವು ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ, ಆಗ ಮಹಿಳೆ ಕಾರಿನ ಹಿಂದೆ ಓಡುತ್ತಾಳೆ. ನಂತರ ಕಾರು ಮುಖ್ಯ ರಸ್ತೆಗೆ ಬಂದು ನಿಲ್ಲುತ್ತದೆ. ಇಬ್ಬರು ನಿಲ್ದಾಣದ ಸಿಬ್ಬಂದಿ ಸಹಾಯ ಮಾಡಲು ಧಾವಿಸುವುದನ್ನು ನೋಡಬಹುದು. ಈ ವಿಡಿಯೋ ಇದಾಗಲೇ 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.