ನ್ಯೂ ಡೆಲ್ಲಿ ಟೆಲಿವಿಷನ್ (ND ಟಿವಿ) ಗೌತಮ್ ಅದಾನಿ ತೆಕ್ಕೆಗೆ ಸೇರುವುದು ಖಚಿತವಾಗುತ್ತಿದ್ದಂತೆ ಪ್ರಣಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನವೆಂಬರ್ 29ರಿಂದಲೇ ಇದು ಜಾರಿಗೆ ಬಂದಿದೆ. ಎನ್ ಡಿ ಟಿವಿಯಲ್ಲಿ RRPR ಹೋಲ್ಡಿಂಗ್ಸ್ ಲಿಮಿಟೆಡ್ ಶೇ.29.18 ಸ್ಟೇಕ್ ಗಳನ್ನು ಹೊಂದಿತ್ತು.
ಅದಾನಿ ಸಮೂಹ ಈಗಾಗಲೇ ಈ ಸ್ಟೇಕ್ ಗಳನ್ನು ತನ್ನದಾಗಿಸಿಕೊಂಡಿದ್ದು, ಹೀಗಾಗಿ RRPR ಹೋಲ್ಡಿಂಗ್ಸ್ ಲಿಮಿಟೆಡ್ ನಿರ್ದೇಶಕ ಸ್ಥಾನಕ್ಕೆ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಶೇಕಡಾ 26ರಷ್ಟು ಸ್ಟೇಕ್ ಸಾರ್ವಜನಿಕ ವಲಯದಲ್ಲಿದ್ದು, ಇವುಗಳ ಖರೀದಿಗೂ ಅದಾನಿ ಮುಂದಾಗಿದ್ದಾರೆ.
ಅದಾನಿ ಸಮೂಹ ಇದರಲ್ಲಿ ಯಶಸ್ವಿಯಾದರೆ ಅವರು ಒಟ್ಟು ಶೇಕಡಾ 55.18 ಸ್ಟೇಕ್ ಹೊಂದುವಂತಾಗಲಿದ್ದು, ಎನ್ ಡಿ ಟಿವಿಯ ಸಂಪೂರ್ಣ ಮಾಲೀಕತ್ವ ಅವರಿಗೆ ಸೇರಲಿದೆ. ಇನ್ನು ಪ್ರಣಯ್ ಹಾಗೂ ಅವರ ಪತ್ನಿ ರಾಧಿಕಾ ಶೇಕಡಾ 32.26 ಸ್ಟೇಕ್ ಗಳನ್ನು ಹೊಂದಿದ್ದಾರೆ.