ಕೋಲ್ಕತ್ತಾದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತ್ರಿಶೂಲವನ್ನು ಕುತ್ತಿಗೆಗೆ ಚುಚ್ಚಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ.
ಆತನನ್ನು ಕಂಡು ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಯ ಸಿಬ್ಬಂದಿಗೆ ಅಚ್ಚರಿಯಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದ ಭಾಸ್ಕರ್ ರಾಮ್ ಎಂಬ ವ್ಯಕ್ತಿ 150 ವರ್ಷಗಳಷ್ಟು ಹಳೆಯ ತ್ರಿಶೂಲದಿಂದ ಗಂಟಲು ಚುಚ್ಚಿಕೊಂಡಿದ್ದು, 65 ಕಿಲೋಮೀಟರ್ ಕ್ರಮಿಸಿ ಆಸ್ಪತ್ರೆಗೆ ಬಂದಿದ್ದಾನೆ.
ಕ್ಷುಲ್ಲಕ ವಿಷಯಕ್ಕೆ ಜಗಳದ ನಂತರ ತ್ರಿಶೂಲದಿಂದ ತನ್ನ ಕುತ್ತಿಗೆಯನ್ನು ಚುಚ್ಚಿಕೊಂಡಿದ್ದಾನೆ. ಮುಂಜಾನೆ 3 ಗಂಟೆಗೆ NRS ಆಸ್ಪತ್ರೆಗೆ ತಲುಪಿದ ಭಾಸ್ಕರ್ ರಾಮ್ ಗೆ ನೋವು ಇರಲಿಲ್ಲ ಎಂದು ಹೇಳಿದಾಗ ವೈದ್ಯರಿಗೆ ಆಶ್ಚರ್ಯವಾಯಿತು.
ತಕ್ಷಣವೇ ಚಿಕಿತ್ಸೆ ನೀಡಿದ ಎನ್‌ಆರ್‌ಎಸ್ ಆಸ್ಪತ್ರೆ ವೈದ್ಯರು ಶೀಘ್ರ ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಆತನ ಕುತ್ತಿಗೆಯಿಂದ ತ್ರಿಶೂಲ ಹೊರತೆಗೆದಿದ್ದಾರೆ. 30 ಸೆಂ.ಮೀ ಉದ್ದದ ತ್ರಿಶೂಲವನ್ನು ಸುಮಾರು ಒಂದೂವರೆ ಶತಮಾನಗಳ ಕಾಲ ಅವರ ಮನೆಯಲ್ಲಿ ಸಂರಕ್ಷಿಸಲಾಗಿದೆ. ಅವರು ಅದನ್ನು ಪೂಜಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.