
ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಕಸ್ವಾನ್ ಜಾಗ್ವಾರ್ ಮತ್ತು ಚಿರತೆಯ ಚಿತ್ರಗಳನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಅವುಗಳ ನಡುವಿನ ವ್ಯತ್ಯಾಸ ಕಂಡುಹಿಡಿಯಲು ಹೇಳಿದ್ದಾರೆ. ಈ ಎರಡು ಚಿತ್ರಗಳಲ್ಲಿ ಜಾಗ್ವಾರ್ ಯಾವುದು, ಚಿರತೆ ಯಾವುದು ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಭವ್ಯವಾದ ಪ್ರಾಣಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರ ಬೆನ್ನು ಮಾತ್ರ ಗೋಚರಿಸುವುದರಿಂದ, ಇದು ಕಠಿಣ ಸವಾಲೇ ಸರಿ. “ಎಷ್ಟು ಮಂದಿ ಸರಿಯಾದದ್ದನ್ನು ಗುರುತಿಸುವಿರಿ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಹಲವರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಲವರು ತಮಗೆ ಇದು ಗೊತ್ತೇ ಆಗುತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಈ ಸವಾಲಿಗೆ ಜವಾಬು ಹುಡುಕುವಲ್ಲಿ ನೆಟ್ಟಿಗರು ತಲ್ಲೀನರಾಗಿದ್ದು, ಗೂಗಲ್ ಸರ್ಚ್ ಮಾಡುತ್ತಿದ್ದಾರೆ.
ಅಂದಹಾಗೆ ಚಿರತೆಗಳ ಮೇಲಿನ ಚುಕ್ಕೆಗಳು ದೊಡ್ಡ ಗಾತ್ರದಲ್ಲಿರುವುದಿಲ್ಲ ಮತ್ತು ಎರಡು ತಾಣಗಳ ನಡುವಿನ ಅಂತರವು ತುಂಬಾ ಕಡಿಮೆಯಾಗಿರುತ್ತವೆ, ಆದರೆ ಜಾಗ್ವಾರ್ನ ಚುಕ್ಕೆಗಳು ದೊಡ್ಡದಾಗಿರುತ್ತವೆ ಮತ್ತು ಚಿರತೆಗೆ ಹೋಲಿಸಿದರೆ ಎರಡು ತಾಣಗಳ ನಡುವಿನ ಅಂತರವೂ ದೊಡ್ಡದಾಗಿರುತ್ತದೆ.