ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಸ್ವಭಾವ, ಲಕ್ಷಣ, ಭವಿಷ್ಯವನ್ನು ಹೇಳುತ್ತದೆ. ಮುಖದ ಗಲ್ಲದ ಆಕಾರ ನೋಡಿಯೂ ಅವ್ರ ಸ್ವಭಾವ ಹೇಳಬಹುದು.
ಸಾಮಾನ್ಯ ಗಲ್ಲ ಹೊಂದಿರುವ ಜನರು ಯಾವಾಗಲೂ ಸತ್ಯವನ್ನು ಮಾತನಾಡಲು ಬಯಸ್ತಾರೆ. ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಈ ಜನರು ಗಂಭೀರ ಮತ್ತು ಕಡಿಮೆ ಮಾತನಾಡುವವರಾಗಿರುತ್ತಾರೆ.
ಸಾಮಾನ್ಯಕ್ಕಿಂತ ಸ್ವಲ್ಪ ಉದ್ದ ಗಲ್ಲ ಹೊಂದಿರುವ ಜನರು ಅನೇಕ ಗುಣಗಳನ್ನು ಹೊಂದಿರುತ್ತಾರೆ. ಅವರ ಮನಸ್ಸು ಸ್ಥಿರವಾಗಿರುತ್ತದೆ. ಒಂದೇ ಗುರಿಯನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ.
ಸಣ್ಣ ಗಲ್ಲದ ಜನರು ಆಲಸಿಗಳು ಎನ್ನಲಾಗುತ್ತದೆ. ಅವರು ಅತೃಪ್ತರು. ನಿರ್ಲಜ್ಜ ಮತ್ತು ಕೆಲಸದಿಂದ ಓಡಿ ಹೋದವರು ಎಂದು ಪರಿಗಣಿಸಲಾಗುತ್ತದೆ. ಯಾವುದೇ ಮಹತ್ವಾಕಾಂಕ್ಷೆ ಇರುವುದಿಲ್ಲ.
ದುಂಡನೆ ಗಲ್ಲ ಹೊಂದಿರುವವರು ತರಾತುರಿ ಮಾಡುತ್ತಾರೆ. ಕೋಪಗೊಂಡಂತೆ ಕಾಣಿಸಿಕೊಳ್ಳುತ್ತಾರೆ. ಆದ್ರೆ ಒಳಗಿನಿಂದ ಚುರುಕಾಗಿರುತ್ತಾರೆ.
ಬಾಯಿಯೊಳಗೆ ಗಲ್ಲ ಹೊಕ್ಕಿದಂತೆ ಇದ್ದರೆ ಅವರು ಚಂಚಲರು. ಅವರು ಸೋಮಾರಿಯಾಗಿರುತ್ತಾರೆ. ನಿರಾಶಾವಾದಿ ಮತ್ತು ಖಿನ್ನತೆಗೆ ಒಳಗಾದವರು.
ಗಲ್ಲ ಮುಂದಕ್ಕೆ ವಾಲಿದ್ದರೆ ಶ್ರದ್ಧೆ ಮತ್ತು ಕ್ರಿಯಾತ್ಮಕರಾಗಿರುತ್ತಾರೆ. ಸ್ವಾರ್ಥಿಗಳೆಂದು ಪರಿಗಣಿಸಲಾಗುತ್ತದೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಮೋಸ, ಕಪಟ ಮಾಡುತ್ತಾರೆ.