ಚೀನಾ: ಮಕ್ಕಳು ತಪ್ಪು ಮಾಡಿದಾಗ ಪೋಷಕರ ತಮ್ಮದೇ ಆದ ಶೈಲಿಗಳು ಮತ್ತು ವಿಧಾನಗಳಲ್ಲಿ ಶಿಕ್ಷಿಸುತ್ತಾರೆ. ಮಕ್ಕಳು ಪದೇ ಪದೇ ಮೊಬೈಲ್ ನೋಡುವುದು, ಟಿ.ವಿ. ನೋಡುವುದು ಮಾಡಿದಾಗಲೂ ಶಿಕ್ಷೆಗಳು ಮಾಮೂಲಿ. ಆದರೆ ಎಷ್ಟೇ ಶಿಕ್ಷೆ ಕೊಟ್ಟರೂ ಮಕ್ಕಳು ಮಕ್ಕಳೇ. ಮಾರನೆಯ ದಿನ ಮತ್ತದೇ ಚಾಳಿ. ಟಿ.ವಿ.ಯ ದಾಸನಾಗಿರುವ ಮಗನಿಗೆ ಈ ಅಮ್ಮ ನೀಡಿರುವ ಶಿಕ್ಷೆ ಮಾತ್ರ ಇದೀಗ ಭಾರಿ ವೈರಲ್ ಆಗಿದೆ.
ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ತಮ್ಮ ಎಂಟು ವರ್ಷದ ಮಗ ಪದೇ ಪದೇ ಟಿ.ವಿ.ನೋಡುತ್ತಾನೆ ಎನ್ನುವ ಕಾರಣಕ್ಕೆ ಬೇರೆಲ್ಲಾ ಶಿಕ್ಷೆ ಕೊಟ್ಟು ಸುಸ್ತಾಗಿದ್ದ ಈ ಅಮ್ಮ, ಇದೀಗ ವಿಚಿತ್ರ ಶಿಕ್ಷೆ ಕೊಟ್ಟಿದ್ದಾಳೆ. ಮತ್ತೆ ಟಿ.ವಿ ನೋಡುವ ಸಾಹಸವನ್ನೂ ಈ ಬಾಲಕ ಮಾಡುವುದಿಲ್ಲ.
ಅಷ್ಟಕ್ಕೂ ಭಾರಿ ಗಂಭೀರ ಹಾಗೂ ಅಮಾನವೀಯವಾದ ಶಿಕ್ಷೆಯನ್ನು ಅಮ್ಮ ಕೊಟ್ಟಿಲ್ಲ. ಬದಲಿಗೆ ಮಗನಿಗೆ ರಾತ್ರಿಯಿಡೀ ಮಲಗಲು ಬಿಡದೇ ಟಿ.ವಿ. ನೋಡಿಸಿದ್ದಾಳೆ! ಕೆಲಸಕ್ಕೆ ಹೋಗಿದ್ದ ದಂಪತಿ ಮನೆಗೆ ಬಂದಾಗಲೂ ಮಗ ಟಿ.ವಿ. ನೋಡುತ್ತಿದ್ದುದರಿಂದ ಸಿಟ್ಟಿಗೆದ್ದು ಈ ಕೆಲಸ ಮಾಡಿದ್ದಾರೆ. ಹೋಂ ವರ್ಕ್, ಸ್ನಾನ, ತಿಂಡಿ ಏನೂ ಮಾಡದ ಮಗ ಟಿ.ವಿ. ನೋಡುತ್ತಿದ್ದುದಕ್ಕೆ ಸಿಟ್ಟಿನಿಂದ ಈ ಶಿಕ್ಷೆ ಕೊಟ್ಟಿದ್ದು, ಮಲಗಲು ಬಿಡಲಿಲ್ಲ. ಇದರಿಂದ ತಮ್ಮ ಮಗ ಇನ್ನೆಂದೂ ಟಿ.ವಿ. ಅಧಿಕ ನೋಡುವ ಸಾಹಸ ಮಾಡಲಾರ ಎಂದಿದ್ದಾರೆ.
ಇದು ತೀರಾ ಒಳ್ಳೆಯ ಐಡಿಯಾ ಎಂದು ಹಲವು ಪಾಲಕರು ಕಮೆಂಟ್ ಮಾಡಿ ತಿಳಿಸುತ್ತಿದ್ದಾರೆ.
https://www.youtube.com/watch?v=OsxO66WX7ec