ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಮೊದಲು ಚಾರ್ಮಾಡಿ ಅರಣ್ಯದ ಅಂಚಿನಲ್ಲಿ ಟ್ರಯಲ್ ಬಾಂಬ್ ಸ್ಪೋಟ ನಡೆಸಿದ ಶಂಕೆ ವ್ಯಕ್ತವಾಗಿದೆ.
ಬೆಂದ್ರಾಳ ಅರಣ್ಯದಲ್ಲಿ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ಕೂಡ ಸ್ಪೋಟ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ತುಂಗಾ ತೀರ ಮಾತ್ರವಲ್ಲ, ಚಾರ್ಮಾಡಿ ಅರಣ್ಯದಲ್ಲಿಯೂ ಟ್ರಯಲ್ ಬ್ಲಾಸ್ಟ್ ಮಾಡಲಾಗಿದೆ. ಕಳೆದ ಏಳೆಂಟು ದಿನಗಳ ಹಿಂದೆ ರಾತ್ರಿ 11 ಗಂಟೆಯ ವೇಳೆಗೆ ಭಾರಿ ಸ್ಫೋಟದ ಶಬ್ದ ಕೇಳಿ ಬಂದಿದೆ. ಬೆಂದ್ರಾಳ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಕಾರ್ಯ ನಿರ್ವಹಿಸಿದ ಕುರಿತ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಸ್ಯಾಟಲೈಟ್ ಬಳಸಿ ಸಂವಹನ ನಡೆಸಿದ ಬಗ್ಗೆ ತನಿಖೆಗೆ ತೆರಳಿದ್ದ ಪೊಲೀಸರಿಗೆ ಸ್ಥಳೀಯ ನಿವಾಸಿ ಚೆಲುವಮ್ಮ ಮಾಹಿತಿ ನೀಡಿದ್ದಾರೆ. ಭಾರಿ ಸ್ಪೋಟದ ಶಬ್ದ ಕೇಳಿ ಬಂದ ಬಗ್ಗೆ ದೂರು ನೀಡಿದ್ದಾರೆ. ಭಾರಿ ಪ್ರಮಾಣದಲ್ಲಿ ಸ್ಪೋಟದ ಶಬ್ದ ಕೇಳಿ ಬಂದಿತ್ತು. ಕಾಡಾನೆ ಓಡಿಸಲು ಗರ್ನಾಲ್ ಬಳಸಿರಬಹುದು ಎಂದು ಭಾವಿಸಿದ್ದೆವು. ಆದರೆ, ಅದು ಗರ್ನಾಲ್ ಸ್ಫೋಟಕ್ಕಿಂತಲೂ ಹೆಚ್ಚು ಶಬ್ದ ಕೇಳಿ ಬಂದಿತ್ತು ಎಂದು ಸ್ಪೋಟದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಆಧರಿಸಿ ಶೋಧ ನಡೆಸಲಾಗಿದೆ ಎನ್ನಲಾಗಿದೆ.