alex Certify ಭಾರತದಲ್ಲಿ ಜೋರಾಗಿದೆ ಅವತಾರ್‌-2 ಅಬ್ಬರ: ರಿಲೀಸ್‌ಗೂ ಮೊದಲೇ ದಾಖಲೆ ಮಾಡಿದ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಜೋರಾಗಿದೆ ಅವತಾರ್‌-2 ಅಬ್ಬರ: ರಿಲೀಸ್‌ಗೂ ಮೊದಲೇ ದಾಖಲೆ ಮಾಡಿದ ಚಿತ್ರ 

ಹಾಲಿವುಡ್‌ನ ಅವತಾರ್‌-2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ‘ಅವತಾರ್- ದಿ ವೇ ಆಫ್ ವಾಟರ್’ ಡಿಸೆಂಬರ್ 16 ರಂದು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ. ಬಿಡುಗಡೆಗೂ ಮುನ್ನವೇ ಪ್ರಪಂಚದಾದ್ಯಂತ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ರೇಝ್‌ ಶುರುವಾಗಿದೆ. ಅವತಾರ್ 2 ಬಿಡುಗಡೆಗೆ ಮೊದಲೇ ಭಾರತದಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಗಲ್ಲಾಪೆಟ್ಟಿಗೆ ದೋಚಲು ಸಿದ್ಧವಾಗಿರುವ ಅವತಾರ್ 2 ಟ್ರೇಲರ್‌ ಕೂಡ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ.

ಇತ್ತೀಚೆಗಷ್ಟೆ ಅವತಾರ್‌-2 ಟ್ರೇಲರ್‌ ಬಿಡುಗಡೆಯಾಗಿತ್ತು. ಟ್ರೇಲರ್‌ ವೀಕ್ಷಿಸಿದ ಚಿತ್ರ ಪ್ರೇಮಿಗಳು ಸಿನೆಮಾ ನೋಡಲು ಒಂದು ತಿಂಗಳ ಮುಂಚೆಯೇ ಮುಂಗಡ ಟಿಕೆಟ್‌ ಬುಕ್ಕಿಂಗ್ ಮಾಡಿದ್ದಾರೆ. ಆರಂಭಿಕ ಶೋಗಳು ಈಗಾಗ್ಲೇ ಹೌಸ್‌ಫುಲ್ ಆಗಿವೆ. ಕಳೆದ ಮೂರು ದಿನಗಳಲ್ಲಿ ಅವತಾರ್ 2 ಸಿನೆಮಾದ 15,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ʼಅವತಾರ್ – ದಿ ವೇ ಆಫ್ ವಾಟರ್ʼ ಚಿತ್ರದ ಟ್ರೈಲರ್‌ನಲ್ಲಿರುವ ಅದ್ಭುತ ವಿಎಫ್‌ಎಕ್ಸ್, ಸ್ಪೆಷಲ್ ಎಫೆಕ್ಟ್, ಸೌಂಡ್ ಮತ್ತು ಬ್ಯಾಕ್‌ಗ್ರೌಂಡ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. ಭಾರತೀಯ ಪ್ರೇಕ್ಷಕರಿಗೆ ಅವತಾರ್ ಹೊಸ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಇದು ದುಬಾರಿ ಚಿತ್ರಗಳಲ್ಲೊಂದು. ಅವತಾರ್ 2 ಸೂಪರ್‌ ಹಿಟ್ ಎನಿಸಿಕೊಳ್ಳಲು ಕೋಟಿ ಕೋಟಿ ಕಲೆಕ್ಷನ್‌ ಮಾಡಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...