ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ಮಾಲಾಧಾರಿಗಳು ಪೂಜೆ ಪುನಸ್ಕಾರದಲ್ಲಿ ಪಾಲ್ಗೊಂಡಿದ್ದು, ನೇಮ ನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ಇದರ ಮಧ್ಯೆ ಶಬರಿಮಲೆ ಸ್ವಾಮಿ ಅಯ್ಯಪ್ಪ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಇಲ್ಲಿದೆ. ರಾಷ್ಟ್ರಪತಿಗಳನ್ನು ಹೊರತುಪಡಿಸಿದರೆ ಶಬರಿಮಲೆ ಸ್ವಾಮಿ ಅಯ್ಯಪ್ಪನಿಗೆ ಮಾತ್ರ ಪ್ರತ್ಯೇಕ ಪಿನ್ ಕೋಡ್ ಚಾಲ್ತಿಯಲ್ಲಿದೆ.
689713 ಪಿನ್ ಕೋಡ್ ಹೊಂದಿರುವ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಂಚೆ ಕಚೇರಿ ವಾರ್ಷಿಕ ಮಕರ ವಿಳಕ್ಕು ಯಾತ್ರೆ ವೇಳೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಈ ಅಂಚೆ ಮುದ್ರೆಯು 18 ಮೆಟ್ಟಿಲು ಸಹಿತ ಅಯ್ಯಪ್ಪನ ವಿಗ್ರಹವನ್ನು ಒಳಗೊಂಡಿದೆ.
ಈ ಮುದ್ರೆಯನ್ನು ಒಳಗೊಂಡಿರುವ ಕಾಗದಗಳನ್ನು ತಮ್ಮ ಮನೆಗೆ ಹಾಗೂ ನೆಂಟರಿಷ್ಟರಿಗೆ ಕಳುಹಿಸಲು ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ. ಅಲ್ಲದೆ ಇದೇ ಅಂಚೆ ಕಚೇರಿ ಮೂಲಕ ಅಯ್ಯಪ್ಪ ಸ್ವಾಮಿಗೂ ಸಹ ಹರಕೆ ಕಾಗದಗಳು ಬರುತ್ತವೆ.