ನಟ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ. 2002ರಲ್ಲಿ ನಡೆದ ಪ್ರಕರಣ ಆರೋಪ ಎದುರಿಸುತ್ತಿದ್ದಾಗ ಸಲ್ಮಾನ್ ಖಾನ್ 20-25 ಕೋಟಿ ರೂ. ಖರ್ಚು ಮಾಡಿದ್ದನ್ನು ಅವರ ತಂದೆ ಸಲೀಂ ಖಾನ್ ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಹಲವು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ, ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೂ ಅವರ ಚಿತ್ರಗಳಿಗಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನವು ಹೈಲೈಟ್ ಆಗಿ ಕಾಣಿಸುತ್ತದೆ.
ಕಾನೂನಿನೊಂದಿಗೆ ಅವರ ಗುದ್ದಾಟವು ಗುಪ್ತವಾಗಿ ಉಳಿದಿಲ್ಲ. ಸಲ್ಮಾನ್ ತಂದೆ ಸಲೀಂ ಖಾನ್ 2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ತನ್ನ ಮಗನ ಖುಲಾಸೆಗಾಗಿ ಮಿತವ್ಯಯವಿಲ್ಲದೆ ಖರ್ಚು ಮಾಡುವ ಬಗ್ಗೆ ಮಾತನಾಡಿದ್ದಾರೆ.
ಕುಡಿದು ವಾಹನ ಚಲಾಯಿಸಿ ಕೆಲವು ಪಾದಚಾರಿಗಳ ಮೇಲೆ ತನ್ನ ಕಾರನ್ನು ಹತ್ತಿಸಿ ಅವರ ಸಾವಿಗೆ ಕಾರಣವಾದ ಆರೋಪದ ಕಾರಣ ನ್ಯಾಯಾಲಯಕ್ಕೆ ಆಗಾಗ್ಗೆ ಅವರು ಹೋಗಿ ಬರುತ್ತಿದ್ದರು.
2015 ರಲ್ಲಿ ಬಾಂಬೆ ಹೈಕೋರ್ಟ್ ಪ್ರಕರಣದ ಎಲ್ಲಾ ಆರೋಪಗಳಿಂದ ಸಲ್ಮಾನ್ ಖಾನ್‌ರನ್ನು ಮುಕ್ತಗೊಳಿಸಿತು. ಸೆಷನ್ಸ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದ ಏಳು ತಿಂಗಳ ನಂತರ ಹೈಕೋರ್ಟ್ ಈ ತೀರ್ಪು ನೀಡಿತ್ತು.
ಬಾಂಬೆ ಹೈಕೋರ್ಟ್‌ನ ತೀರ್ಪಿನಿಂದ ಸಂತಸಗೊಂಡಿರುವ ಸಲೀಂ ಖಾನ್, ಸೂಪರ್‌ಸ್ಟಾರ್ ಅನುಭವಿಸಿದ ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡಿದ್ದಾರೆ. 20-25 ಕೋಟಿ ರೂ. ಖರ್ಚು ಮಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ.