ಇತ್ತೀಚೆಗೆ ‘ಸಸುರಲ್ ಸಿಮರ್ ಕಾ’ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿರುವ ದೀಪಿಕಾ ಕಾಕರ್ ಅವರು ಟ್ರೋಲ್ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಪತಿ ಶೋಯೆಬ್ ಅವರೊಂದಿಗೆ ದಾದಾಸಾಹೇಬ್ ಫಾಲ್ಕೆ ಐಕಾನ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ ಬರುವಾಗ ಆಕೆ ಪೋಸ್ ನೀಡುತ್ತ ಎಡವಿ ಬೀಳುವಂತಾದರು.
ವೈರಲ್ ವಿಡಿಯೋದಲ್ಲಿ ದೀಪಿಕಾ ಆಕಸ್ಮಿಕವಾಗಿ ಮುಗ್ಗರಿಸುವುದನ್ನು ಕಾಣಬಹುದು. ಬಹುತೇಕ ಬೀಳುವಂತಾಗಿದ್ದು, ಕೊನೆಗೆ ಸಮತೋಲನವನ್ನು ಮರಳಿ ಪಡೆದರು. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಆಕೆ ಬೀಳದಂತೆ ತಡೆಯಲು ಯತ್ನಿಸಿದ. ಈ ಪ್ರಯತ್ನಕ್ಕೆ ನಟಿ ಕೋಪಗೊಂಡು ಬಹಿರಂಗ ಅಸಮಾಧಾನ, ಸಿಟ್ಟು ವ್ಯಕ್ತಪಡಿಸಿದರು. ತನಗೆ ಸಹಾಯ ಬೇಡ ಎಂದರು.
ಕಾಕರ್ ಈ ವರ್ತನೆಯು ನೆಟ್ಟಿಗರಿಗೆ ಇಷ್ಟವಾಗಿಲ್ಲ. ಆನ್ಲೈನ್ನಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ ನಟಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಅವಳಿಗೆ ಸಹಾಯ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದವನೊಂದಿಗೆ ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೊಬ್ಬರು, ಆ ವ್ಯಕ್ತಿ ಪ್ರಾಮಾಣಿಕವಾಗಿ ಪ್ರಯತ್ನಿಸಿದೆ ಅವಳು ಬಿದ್ದಿದ್ದರೆ ಚೆನ್ನಾಗಿತ್ತು ಎಂದು ಕುಟುಕಿದ್ದಾರೆ.