ತುಮಕೂರು: ಬಿಜೆಪಿ ಮಾಜಿ ಶಾಸಕ ಬಿರೇಸ್ ಸುರೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ತುಮಕೂರಿನ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತುಮಕೂರು ಗ್ರಾಮಾಂತರ ಶಾಸಕ ಬಿ.ಸಿ. ಗೌರಿಶಂಕರ್ ಅವರ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಸುರೇಶ್ ಗೌಡ ವಿರುದ್ಧ ಜೀವ ಬೆದರಿಕೆ, ಸುಳ್ಳು ಕೊಲೆ ಆರೋಪ ಮಾಡಿದ್ದಾರೆ ಎಂದು ಗೌರಿಶಂಕರ್ ದೂರು ನೀಡಿದ್ದರು.
ಜೈಲಿನಲ್ಲಿರುವ ಸುಜಯ್ ಭಾರ್ಗವ್ ಗೆ 5 ಕೋಟಿ ರೂಪಾಯಿ ಸುಫಾರಿ ಕೊಟ್ಟಿದ್ದೇನೆ ಎಂದು ಸುಳ್ಳು ಕೊಲೆ ಆರೋಪ ಮಾಡಿದ್ದಾರೆ. ಸುರೇಶ್ ಗೌಡ ಹೇಳಿಕೆಯಿಂದ ನನಗೆ ಜೀವ ಭಯ ಕಾಡುತ್ತಿದೆ ಎಂದು ಗೌರಿಶಂಕರ್ ದೂರು ನೀಡಿದ್ದು, ಶಾಸಕರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.