ಡೋರ್ ಬೆಲ್ ಬಾರಿಸುವ ಬದಲು ಬಾಗಿಲು ತಟ್ಟುತ್ತೀರಾ….? 26-11-2022 5:10AM IST / No Comments / Posted In: Latest News, Live News, Astro ವಾಸ್ತು ಶಾಸ್ತ್ರವನ್ನು ನಂಬುವವರು ವಾಸ್ತುವನ್ನು ಇಡೀ ಮನೆಗೆ ಅಳವಡಿಸಬೇಕು. ಇದ್ರಿಂದ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ವಾಸ್ತು ಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶಾಂತಿ ಹಾಗೂ ಸಮೃದ್ಧಿಗೆ ವಾಸ್ತು ಬಹಳ ಮುಖ್ಯ. ಮನೆಯಲ್ಲಿ ಯಾವುದೇ ವಾಸ್ತು ದೋಷವಿದ್ರೆ ಅದು ಮನೆ ಸದಸ್ಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಪ್ರತಿಯೊಂದು ವಸ್ತುಗಳು, ಗೋಡೆ, ಬಾಗಿಲು, ಮಲಗುವ ಸ್ಥಳ ಎಲ್ಲವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಡೋರ್ ಬೆಲ್ ಕೂಡ ವಾಸ್ತು ಪ್ರಕಾರ ಇರಬೇಕು. ಮನೆ ಪ್ರವೇಶ ಮಾಡುವ ವ್ಯಕ್ತಿಗಳ ನಕಾರಾತ್ಮಕ ಶಕ್ತಿ ಮನೆಯವರ ಮೇಲೆ ಪ್ರಭಾವ ಬೀರುತ್ತದೆ. ಇದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೆಲಸ ಅರ್ಧಕ್ಕೆ ನಿಲ್ಲುತ್ತದೆ. ಗೌರವ ಕಡಿಮೆಯಾಗುತ್ತದೆ. ಬಾಗಿಲು ಬಡಿಯುವುದು ಅಥವಾ ಕೂಗಿ ಕರೆದು ಮನೆಯೊಳಗೆ ಪ್ರವೇಶ ಮಾಡುವುದು ಗೌರವಕ್ಕೆ ಧಕ್ಕೆ ತರುತ್ತದೆ. ಬೆಲ್ ಬದಲು ಕೂಗಿ ಕರೆಯುವುದ್ರಿಂದ ಮಾತು ಮಾತಿಗೂ ಗಲಾಟೆಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಶಾಸ್ತ್ರದ ಪ್ರಕಾರ ನೆಲದಿಂದ ಕನಿಷ್ಠ ಐದು ಅಡಿ ಎತ್ತರದಲ್ಲಿ ಡೋರ್ ಬೆಲ್ ಇರಬೇಕು. ಕಪ್ಪು ಬಣ್ಣ ಬಿಟ್ಟು ಬೇರೆ ಯಾವುದೇ ಬಣ್ಣದ ಡೋರ್ ಬೆಲ್ ನೀವು ಬಳಸಬಹುದು. ಕಪ್ಪು ಬಣ್ಣದ ಬೆಲ್ ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ. ಡೋರ್ ಬೆಲ್, ನೇಮ್ ಪ್ಲೇಟ್ ಕೆಳಗೆ ಇರಬೇಕು.