ಜೆಸ್ಸಿಕಾ ಆಯರ್ಸ್ ಎಂಬ ಮಹಿಳೆ ತಮ್ಮ ಮೊದಲ ಮಗುವಿನ ಜನನದ ಕೇವಲ ಮೂರು ದಿನಗಳ ನಂತರ 2014 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡರು. ಇವರ ಪತಿಯ ಕೊಲೆಯಾಗಿತ್ತು. ಆದರೆ ಈ ಕೊಲೆಯ ಕುರಿತು 9 ವರ್ಷಗಳ ಬಳಿಕ ಜೆಸ್ಸಿಕಾ ಟಿಕ್ಟಾಕ್ನಲ್ಲಿ ‘ದಿ ಸಿಂಗಿಂಗ್ ವಿಧವೆ’ ಎಂಬ ಹೆಸರಿನ ಒಂದು ವಿಡಿಯೋ ಮಾಡಿದ್ದು, ಭಾರಿ ಟೀಕೆಗೆ ಒಳಗಾಗಿದ್ದಾರೆ.
ತಮ್ಮ ಪತಿ ಡಾನ್ ಹಾಗ್ನ ಸಾವಿನ ಕಥೆಯನ್ನು ಈ ವಿಡಿಯೋದಲ್ಲಿ ಅವರು ವಿವರಿಸಿದ್ದಾರೆ. ತಮ್ಮ ಪತಿ ಹೇಗೆ ಕೊಲೆಯಾದರು ಎಂಬ ಬಗ್ಗೆ ಅವರು ವಿವರಿಸಿದ್ದಾರೆ. ಅವರು ಆ ರೀತಿ ವಿವರಿಸಿದರೆ ಅಷ್ಟು ಟೀಕೆಗೆ ಒಳಗಾಗುತ್ತಿರಲಿಲ್ಲ. ಆದರೆ ಜೆಸ್ಸಿಕಾ ಉತ್ಸಾಹಭರಿತವಾಗಿ ಯಾವುದೇ ಉತ್ತಮ ಹಾಡಿಗೆ ನೃತ್ಯ ಮಾಡುತ್ತಿರುವಂತೆ ಅವರ ವಿಡಿಯೋ ಕಾಣಿಸುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
“ಎಂಟು ವರ್ಷಗಳ ಹಿಂದೆ, ಒಬ್ಬ ವ್ಯಕ್ತಿ ನನ್ನ ಪತಿಯನ್ನು ಗುಂಡಿಕ್ಕಿ ಕೊಂದನು. ಆಗ ನಾನು ಮೂರು ದಿನಗಳ ಬಾಣಂತಿಯಾಗಿದ್ದೆ. ಹನ್ನೊಂದು ತಿಂಗಳ ನಂತರ, ಅವನನ್ನು ಗುಂಡು ಹಾರಿಸಿದ ವ್ಯಕ್ತಿ ಮರಣದಂಡನೆಗೆ ಒಳಗಾದ. ನಾನು ಈ ಕೊಲೆಗಾರನಿಗೆ ನಮ್ಮ ಪ್ರೇಮಕಥೆಯನ್ನು ಹೇಳಿದೆ. ಇದನ್ನು ಕೇಳಿಯಾದರೂ ಅವನು ತಾನು ಮಾಡಿದ್ದು ತಪ್ಪು ಎಂದು ಭಾವಿಸಿದರೆ ಅದೇ ನನ್ನ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ” ಎಂದು ಹಾಡಿನಲ್ಲಿ ಹೇಳಲಾಗಿದೆ.
https://twitter.com/ycsm1n/status/1594876674512146432?ref_src=twsrc%5Etfw%7Ctwcamp%5Etweetembed%7Ctwterm%5E1594876674512146432%7Ctwgr%5E429baed7843e5e53b9a8e40aa61ccede4cf0989b%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwoman-slammed-for-making-video-on-husbands-murder-this-is-just-disrespectful-3546436