ವಿಜಯನಗರ: ಬಿಎಸ್ಎನ್ಎಲ್ ಕಚೇರಿ ಗೇಟ್ ಹಿಡಿದು ಆಟವಾಡುತ್ತಿದ್ದ ಬಾಲಕ ಗೇಟ್ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.
8 ವರ್ಷದ ಗೌತಮ್ ಮೃತ ಬಾಲಕ. ಪೋಷಕರೊಂದಿಗೆ ಆಗಮಿಸಿದ್ದ ಬಾಲಕ ಆಟವಾಡುತ್ತ ಬಿ ಎಸ್ ಎನ್ ಎಲ್ ಕಚೇರಿಯ ಗೇಟಿನ ಬಳಿ ನಿಂತಿದ್ದ. ಶಿಥಿಲಾವಸ್ಥೆಯಲ್ಲಿದ್ದ ಗೇಟ್ ಬಾಲಕನ ಮೇಲೆ ಬಿದ್ದಿದೆ.
ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಟವಾಡುತ್ತಿದ್ದ ಬಾಲಕ ಕಣ್ಣೆದುರಲ್ಲೇ ಮೃತಪಟ್ಟಿರುವುದು ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಬಿ ಎಸ್ ಎನ್ ಎಲ್ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿಯೇ ಬಾಲಕನ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.