alex Certify ಉತ್ತರ ಅಮೆರಿಕದ ಆಕಾಶವನ್ನು ಬೆಳಗಿಸುತ್ತಿದೆ ಅರೋರಾ ಬೋರಿಯಾಲಿಸ್….! ಇಲ್ಲಿದೆ ಇದೇನೆಂಬುದರ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಅಮೆರಿಕದ ಆಕಾಶವನ್ನು ಬೆಳಗಿಸುತ್ತಿದೆ ಅರೋರಾ ಬೋರಿಯಾಲಿಸ್….! ಇಲ್ಲಿದೆ ಇದೇನೆಂಬುದರ ವಿವರ

ಅರೋರಾ ಬೋರಿಯಾಲಿಸ್ ಉತ್ತರ ಅಮೆರಿಕಾದಲ್ಲಿ ಆಕಾಶವನ್ನು ಬೆಳಗಿಸುತ್ತಿರುವ ಅದ್ಭುತ ಫೋಟೋ ವೈರಲ್​ ಆಗಿದೆ.

ಅರೋರಾ ಬೋರಿಯಾಲಿಸ್​ ಎಂದರೆ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದೆ.

ಸಾಮಾನ್ಯವಾಗಿ ಆರೋರಾ ಬೋರಿಯಾಲಿಸ್ ಹಸಿರು ಬಣ್ಣದ ಹೊಳಪಿನೊಂದಿಗೆ ಕೂಡಿರುತ್ತದೆ. ಕೆಲವೊಮ್ಮೆ ಕೆಂಪು ಬಣ್ಣವು ಸಹ ಇದರಲ್ಲಿರುವುದುಂಟು.

ಇಂಥದ್ದೊಂದು ಸುಂದರ ದೃಶ್ಯವನ್ನು ಅಮೆರಿಕದ ರಾಷ್ಟ್ರೀಯ ಉದ್ಯಾನ ಶೇರ್​ ಮಾಡಿದ್ದು, ಅದೀಗ ವೈರಲ್​ ಆಗಿದೆ. ಉತ್ತರ ಅಮೆರಿಕದ ಡೆನಾಲಿಯಲ್ಲಿನ ಅತಿ ಎತ್ತರದ ಪರ್ವತ ಶಿಖರದ ಮೇಲೆ ಆಕಾಶವನ್ನು ಬೆಳಗಿಸಿತ್ತು ಎಂದು ಶೀರ್ಷಿಕೆ ನೀಡಲಾಗಿದೆ.

ಮೊದಲ ನೋಟಕ್ಕೆ ಇದು ಬೇರಾವುದೋ ದಿಕ್ಕಿನಲ್ಲಿ ಜರಗುತ್ತಿರುವ ಸೂರ್ಯೋದಯದಂತೆ ಭಾಸವಾಗುವುದು. ಆರೋರಾ ಬೋರಿಯಾಲಿಸ್ ಅನ್ನು ನಾರ್ದರ್ನ್ ಲೈಟ್ಸ್ (ತೆಂಕಣ ಬೆಳಕು) ಎಂದು ಸಹ ಕರೆಯಲಾಗುತ್ತದೆ.

ಆರೋರಾ ಬೋರಿಯಾಲಿಸ್ ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಮತ್ತು ಮಾರ್ಚ್ ನಿಂದ ಎಪ್ರಿಲ್ ವರೆಗೆ ಘಟಿಸುತ್ತದೆ. ದಕ್ಷಿಣಧ್ರುವ ಪ್ರದೇಶದಲ್ಲಿ ಸಂಭವಿಸುವ ಇದೇ ರೀತಿಯ ವಿದ್ಯಮಾನವು ಆರೋರಾ ಆಸ್ಟ್ರಾಲಿಸ್ ಎಂದು ಹೆಸರಾಗಿದೆ.

ಈ ಕುರಿತು ವಿಜ್ಞಾನಿಕವಾಗಿಯೂ ವಿವರಣೆ ನೀಡಲಾಗಿದೆ. ಸೂರ್ಯನ ವಾತಾವರಣದಿಂದ ಹೆಚ್ಚು ಚಾರ್ಜ್ ಮಾಡಲಾದ ಕಣಗಳು ಸೌರ ಮಾರುತದ ಮೂಲಕ ಭೂಮಿಯ ವಾತಾವರಣಕ್ಕೆ ಚಲಿಸಿದಾಗ ಅದು ಸಂಭವಿಸುತ್ತದೆ.

ಉಲ್ಲೇಖಕ್ಕಾಗಿ, ಸೌರ ಮಾರುತವು ಪ್ಲಾಸ್ಮಾದಿಂದ ಮಾಡಿದ ಎಲೆಕ್ಟ್ರಾನ್ಗಳು ಮತ್ತು ಪ್ರೊಟಾನ್ಗಳು ಸೂರ್ಯನಿಂದ ಮತ್ತು ಸೌರಮಂಡಲದವರೆಗೆ ಪ್ರತಿ ಸೆಕೆಂಡಿಗೆ ಸುಮಾರು 560 ಮೈಲುಗಳಷ್ಟು (ಸೆಕೆಂಡಿಗೆ 900 ಕಿಲೋಮೀಟರ್) (ಗುಣಾತ್ಮಕ ತಾರ್ಕಿಕ ಗುಂಪು) ಯಿಂದ ಹರಿಯುತ್ತದೆ. ಜನರು ಈ ವೈರಲ್​ ಫೋಟೋಗೆ ಕಮೆಂಟ್​ ಮಾಡಿದ್ದು, ತಾವು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿರುವ ಬಗ್ಗೆ ವಿವರಣೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...