ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಿದೆ. ನಮ್ಮ ಗಳಿಕೆಯಲ್ಲಿ ಶೇಕಡಾ 10 ರಷ್ಟನ್ನು ದಾನವಾಗಿ ನೀಡಿದ್ರೆ ಶುಭವೆಂದು ನಂಬಲಾಗಿದೆ. ಗ್ರಹಗಳಿಗೆ ಸಂಬಂಧಿಸಿದ ಎಲ್ಲ ದೋಷಗಳೂ ದಾನದಿಂದ ನಿವಾರಣೆಯಾಗುತ್ತದೆ. ನೀವು ದಾನ ಮಾಡಿದ ವ್ಯಕ್ತಿ ಮನದಲ್ಲಿ ಮೂಡುವ ಕೃತಜ್ಞತೆ ದೇವತೆಗಳು ನಿಮಗೆ ನೀಡುವ ಆಶೀರ್ವಾದವೆಂದು ನಂಬಲಾಗಿದೆ.
ಬಲಗೈ ನೀಡಿದ ದಾನ ಎಡಗೈಗೆ ಗೊತ್ತಾಗಬಾರದೆಂದು ಹಿರಿಯರು ಹೇಳ್ತಾರೆ. ದಾನವನ್ನು ಪ್ರಚಾರಕ್ಕಾಗಿ ಮಾಡಬಾರದು. ತೋರಿಕೆ ದಾನ ಫಲ ನೀಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಡವನಿಗೆ ಹೂವು ನೀಡಿ ಫೋಟೋವನ್ನು ಫೇಸ್ಬುಕ್ ನಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಪ್ರಚಾರಕ್ಕಾಗಿ ಮಾಡುವ ಈ ರೀತಿಯ ದಾನದಿಂದ ಯಾವ ಪ್ರಯೋಜನವೂ ಇಲ್ಲ.
ಧಾನ್ಯಗಳನ್ನು ದಾನ ರೂಪದಲ್ಲಿ ನೀಡಿದ್ರೆ ಜೀವನದಲ್ಲಿ ಅನ್ನದ ಕೊರತೆ ಎದುರಾಗುವುದಿಲ್ಲ.
ಧಾನ್ಯಗಳನ್ನು ಬೇಯಿಸದೆ ದಾನ ಮಾಡಿದ್ರೆ ಅದನ್ನು ಶುಭವೆಂದು ಪರಿಗಣಿಸಲಾಗಿದೆ.
ವಿಶೇಷ ಪರಿಸ್ಥಿತಿಯಲ್ಲಿ ಮಾತ್ರ ಲೋಹಗಳನ್ನು ದಾನ ಮಾಡಬೇಕು.
ದಾನ ಪಡೆದ ವಸ್ತುಗಳನ್ನು ಬಳಕೆ ಮಾಡುವ ವ್ಯಕ್ತಿಗೆ ಮಾತ್ರ ಲೋಹವನ್ನು ದಾನ ನೀಡಬೇಕು.
ಲೋಹವನ್ನು ದಾನ ನೀಡುವುದ್ರಿಂದ ದುಃಖ ನಿವಾರಣೆಯಾಗುತ್ತದೆ.
ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡುವುದ್ರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಬಳಕೆಗೆ ಬರುವ ಬಟ್ಟೆಗಳನ್ನು ಮಾತ್ರ ದಾನ ಮಾಡಬೇಕು.
ಹರಿದ, ಕೊಳಕಾದ ಬಟ್ಟೆಯನ್ನು ಎಂದೂ ದಾನದ ರೂಪದಲ್ಲಿ ನೀಡಬೇಡಿ.