ಬೀಚಿಂಗ್: ಕೆಲವರು ಎಷ್ಟೇ ದೊಡ್ಡ ಪದವಿ ಪಡೆದು ಎಷ್ಟೇ ದೊಡ್ಡ ಹುದ್ದೆಯಲ್ಲಿ ಇದ್ದರೂ ಅದು ಸಮಾಧಾನ ತರುವುದಿಲ್ಲ. ಇಂದಿನ ವಿಲಕ್ಷಣ ಸುದ್ದಿಗಳಲ್ಲಿ, ಚೀನಾದ ಮಹಿಳೆಯೊಬ್ಬಳ ಬಗ್ಗೆ ಹೇಳುತ್ತಿದ್ದೇವೆ. ಟ್ಯಾನ್ ಎಂಬ ಚೀನಿ ಮಹಿಳೆ ಸ್ಮಶಾನ ಕಾಯುವ ಕೆಲಸ ಮಾಡುತ್ತಿದ್ದು, ಇದೇ ತನಗೆ ಉತ್ತಮ ಉದ್ಯೋಗ ಎನಿಸಿದೆ ಎಂದಿದ್ದಾಳೆ.
ಚೀನಿ ವಿಶ್ವವಿದ್ಯಾಲಯದಲ್ಲೆ ಪದವಿ ಪಡೆದಿರುವ ಈಕೆ ಬೇರೆ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡದೇ ಸ್ಮಶಾನ ಕಾಯುತ್ತಿದ್ದು, ಈಕೆಯ ಸುದ್ದಿ ಇದೀಗ ಭಾರಿ ವೈರಲ್ ಆಗಿದೆ. 22 ವರ್ಷದ ಯುವತಿ ಟ್ಯಾನ್, ಪಶ್ಚಿಮ ಚೀನಾದ ಚಾಂಗ್ಕಿಂಗ್ನಲ್ಲಿರುವ ಪರ್ವತದ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆ ಇದರಿಂದ 4,000 ಯುವಾನ್ (ರೂ. 45,760) ಗಳಿಸುತ್ತಾಳೆ. ಟ್ಯಾನ್ ವಾರದಲ್ಲಿ ಆರು ದಿನಗಳವರೆಗೆ ಬೆಳಿಗ್ಗೆ 8.30 ರಿಂದ 5 ರವರೆಗೆ ಕೆಲಸ ಮಾಡುತ್ತಾಳೆ.
ನನ್ನನ್ನು ನಾನು ‘ಸಮಾಧಿ ಕೀಪರ್’ ಎಂದು ಕರೆದುಕೊಳ್ಳುತ್ತೇನೆ. ನನಗೆ ಬೇರೆ ಇದಕ್ಕಿಂತ ಶಾಂತಿಯುತವಾಗಿರುವ ನೌಕರಿ, ಜಾಗ ಬೇರೊಂದು ಸಿಗಲು ಸಾಧ್ಯವಿಲ್ಲ ಎನ್ನುತ್ತಾಳೆ. ಸ್ಮಶಾನ ಎಂದರೆ ಭಯ ಪಡುವವರೇ ಹಲವರು. ಅಂಥದ್ದರಿಂದ ಇಂಥದ್ದೊಂದು ಉದ್ಯೋಗ ಆಯ್ದುಕೊಂಡಿರುವ ಟ್ಯಾನ್ಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.