ತುಮಕೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಜಿದ್ದಾ ಜಿದ್ದಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ತನ್ನ ವಿರುದ್ಧದ ಆರೋಪಕ್ಕೆ ಶಾಸಕ ಗೌರಿಶಂಕರ್ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಶಾಸಕರು, ಸುರೇಶ್ ಗೌಡ ಹತ್ಯೆಗೆ ತಾನು ಸುಪಾರಿ ಕೊಟ್ಟಿದ್ದಾಗಿ ಆರೋಪಿಸುತ್ತಿದ್ದಾರೆ. ಈ ಮಾತು ಕೇಳಿದರೆ ಚಿಕ್ಕ ಮಕ್ಕಳು ನಕ್ಕು ಬಿಡ್ತಾರೆ. ಸೋಲಿನ ಭಯದಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಕಳೆದ ಬಾರಿ ಸೋತಿದ್ದಕ್ಕೆ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಕೊಲೆಗೆ ಸುಪಾರಿ ಕೊಟ್ಟಿದ್ದರೆ ನಿಮ್ಮದೇ ಸರ್ಕಾರ ಇದೆ ಸಿಬಿಐ ತನಿಖೆ ಮಾಡಿಸಿ. ಮಾಜಿ ಶಾಸಕರ ಆರೋಪದಿಂದಾಗಿ ನನಗೂ ಜೀವಭಯ ಶುರುವಾಗಿದೆ. ಎಸ್ ಪಿ, ಗೃಹ ಸಚಿವರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.