
HP ಶೇ. 10 ರಷ್ಟು ಉದ್ಯೋಗಿಗಳ ವಜಾಗೊಳಿಸಲು ಮುಂದಾಗಿದೆ. ಜಾಗತಿಕವಾಗಿ ಆರ್ಥಿಕ ಸವಾಲು ಎದುರಿಸಲು 6,000 ಉದ್ಯೋಗ ಕಡಿತಗೊಳಿಸಲಿದೆ.
ಪರ್ಸನಲ್ ಕಂಪ್ಯೂಟರ್ ಬೇಡಿಕೆ ಕಡಿಮೆಯಾಗಿದ್ದು, ಆದಾಯ ಕಡಿಮೆಯಾಗಿರುವುದಕ್ಕೆ ಪ್ರತಿಕ್ರಿಯೆಯಾಗಿ ಹೆವ್ಲೆಟ್-ಪ್ಯಾಕರ್ಡ್ ಕಂಪನಿ(HP) ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ.
HP ಪರ್ಸನಲ್ ಕಂಪ್ಯೂಟರ್ ಗಳ ಮಾರುಕಟ್ಟೆಯಲ್ಲಿ ನಿರಂತರ ಕುಸಿತ ದಾಖಲಿಸುತ್ತಿದೆ. ಇದರಿಂದ ಆದಾಯದ ಕೊರತೆಯಾಗಿ ವ್ಯವಹಾರಗಳು, ಉದ್ಯೋಗಿಗಳ ಸಂಖ್ಯೆ ಕಡಿತ, ತಂತ್ರಜ್ಞಾನದ ವೆಚ್ಚ ಕಡಿತಗೊಳಿವಿಕೆ ಆರಂಭವಾಗಿದೆ.
HP ಮುಂದಿನ ಮೂರು ವರ್ಷಗಳಲ್ಲಿ 61,000 ಜಾಗತಿಕ ಉದ್ಯೋಗಿಗಳಲ್ಲಿ 10% ವರೆಗೆ ಕಡಿತಗೊಳಿಸುತ್ತದೆ ಎಂದು CEO ಎನ್ರಿಕ್ ಲೊರೆಸ್ ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಹಲವಾರು ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಡಿಮೆ ಮಾಡುವ ಉದ್ದೇಶಗಳನ್ನು ಬಹಿರಂಗಪಡಿಸಿವೆ. Meta Platforms Cisco Systems, Amazon.com, Twitter ಮೊದಲಾದ ಕಂಪನಿಗಳು ದೊಡ್ಡಮಟ್ಟದಲ್ಲೇ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಹಾರ್ಡ್ ಡ್ರೈವ್ ತಯಾರಕ ಸೀಗೇಟ್ ಟೆಕ್ನಾಲಜಿ ಹೋಲ್ಡಿಂಗ್ಸ್ ಸುಮಾರು 3,000 ಉದ್ಯೋಗಿಗಳನ್ನು ತೆಗೆದುಹಾಕುವುದಾಗಿ ಘೋಷಿಸಿದೆ.