ಮನೆಯ ಕಪಾಟಿನಲ್ಲಿ ನಾವು ಹಣವನ್ನು ಇಡ್ತೆವೆ. ಇಡೀ ತ್ರಿಜೋರಿ ಹಣದಿಂದ ತುಂಬಿ ಹೋಗಲಿ ಅಂತಾ ನಾವು ಬಯಸ್ತೇವೆ. ಆದ್ರೆ ಎಷ್ಟೇ ಕಷ್ಟಪಟ್ಟರೂ ತ್ರಿಜೋರಿ ತುಂಬೋದಿಲ್ಲ. ಅದ್ರ ಬದಲು ಬರಿದಾಗುತ್ತದೆ. ಕಪಾಟಿನಲ್ಲಿ ಹಣ ಯಾವಾಗ್ಲೂ ಇರಬೇಕು ಎನ್ನುವವರು ಕೆಲ ವಾಸ್ತು ಟಿಪ್ಸ್ ಅನುಸರಿಸಬೇಕಾಗುತ್ತದೆ. ಕಪಾಟಿನಲ್ಲಿ ಹಣದ ಜೊತೆ ಕೆಲ ವಸ್ತುಗಳನ್ನು ಇಡಬೇಕಾಗುತ್ತದೆ.
ಭಗವಂತ ಕುಬೇರ : ನಿಮಗೆಲ್ಲ ತಿಳಿದಿರುವಂತೆ ಲಕ್ಷ್ಮಿ ಹೊರತುಪಡಿಸಿ, ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗಿದೆ. ಶ್ರೀಮಂತ ವ್ಯಕ್ತಿಯನ್ನು ಕುಬೇರ ಎಂದೂ ಕರೆಯುತ್ತಾರೆ. ಕುಬೇರನ ವಿಗ್ರಹವನ್ನು ನೀವು ಕಪಾಟಿನಲ್ಲಿ ಇಡಬಹುದು. ಇದ್ರಿಂದ ಸಂಪತ್ತು ವೃದ್ಧಿಯಾಗುತ್ತೆ. ಕಪಾಟಿನಲ್ಲಿ ಕುಬೇರನ ವಿಗ್ರಹವಿಟ್ಟರೆ ಸುಲಭವಾಗಿ ಸಂಪತ್ತನ್ನು ಆಕರ್ಷಿಸಬಹುದಾಗಿದೆ.
ಕಪ್ಪೆ ಚಿಪ್ಪುಗಳು : ಕಪ್ಪೆ ಚಿಪ್ಪುಗಳನ್ನು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಏಳು ಕಪ್ಪೆ ಚಿಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ಕಪಾಟಿನಲ್ಲಿಟ್ಟರೆ ಲಕ್ಷ್ಮಿ ಕೃಪೆ ನಿಮ್ಮ ಮೇಲಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಕನ್ನಡಿ : ವಾಸ್ತು ಶಾಸ್ತ್ರದ ಪ್ರಕಾರ, ಚಿಕ್ಕ ಕನ್ನಡಿಯನ್ನುಲಾಕರ್‌ನಲ್ಲಿ ಇಡುವುದು ಶುಭ. ಕನ್ನಡಿಯಲ್ಲಿ ಕಪಾಟಿನಲ್ಲಿರುವ ಹಣ ಗೋಚರಿಸುತ್ತದೆ. ಇದ್ರಿಂದ ಸಂಪತ್ತು ದುಪ್ಪಟ್ಟಾಗುತ್ತದೆ ಎಂದು ನಂಬಲಾಗಿದೆ.
ಹೊಸ ನೋಟು : ಹೊಸ ನೋಟುಗಳನ್ನು ಕೂಡ ನೀವು ಕಪಾಟಿನಲ್ಲಿ ಇಡಬೇಕು. ಪೂಜೆಯ ಸಮಯದಲ್ಲಿ ಅವುಗಳನ್ನು ತೆಗೆದು ಪೂಜೆ ಮಾಡಿ ಮತ್ತೆ ಲಾಕರ್ ನಲ್ಲಿ ಇಡಿ. ಇದನ್ನು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ.
ಕಪಾಟಿನಲ್ಲಿ ಈ ವಸ್ತು ಇಡಬೇಡಿ : ಹಣವಿಡುವ ಜಾಗ ಪವಿತ್ರವಾಗಿರಬೇಕು. ಹಾಗಾಗಿ ಎಲ್ಲ ವಸ್ತುಗಳನ್ನು ಅಲ್ಲಿ ಇಡುವುದು ಸೂಕ್ತವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಫೋಟೋ, ಕೀಯನ್ನು ಲಾಕರ್ ನಲ್ಲಿ ಇಡಬಾರದು.