ಲಂಡನ್: ಕೋರ್ಟ್ ಕಲಾಪ ನಡೆಯುತ್ತಿದ್ದಾಗ ಆರೋಪಿಯೊಬ್ಬನ ಫೋನ್ನಲ್ಲಿ ಅಶ್ಲೀಲ ಶಬ್ದ ಕೇಳಿ ನ್ಯಾಯಾಧೀಶರು ಕೋರ್ಟ್ ಕಲಾಪವನ್ನು ನಿಲ್ಲಿಸಿ ವಿಚಾರಣೆಯನ್ನು ಮುಂದೂಡಿದ ಘಟನೆ ಇಂಗ್ಲೆಂಡ್ನ ಯಾರ್ಕ್ಷೈರ್ನಲ್ಲಿ ನಡೆದಿದೆ.
ನ್ಯಾಯಾಧೀಶ ರೆಕಾರ್ಡರ್ ಜೆರೆಮಿ ರಿಚರ್ಡ್ಸನ್ ಕ್ಯೂಸಿ ಅವರು 13 ಆರೋಪಿಗಳ ವಿರುದ್ಧ ಮಾದಕ ದ್ರವ್ಯ ಮತ್ತು ಮೊಬೈಲ್ ಫೋನ್ ಅನ್ನು ಜೈಲಿಗೆ ಸಾಗಿಸಿದ ಆರೋಪದ ಮೇಲೆ ವಿಚಾರಣೆ ನಡೆಸುತ್ತಿದ್ದರು. ವಿಚಾರಣೆ ಸಂದರ್ಭದಲ್ಲಿ ಒಬ್ಬ ಜೈಲು ಅಧಿಕಾರಿ ಸೇರಿದಂತೆ ಪ್ರಕರಣದ ಕೆಲವು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇತರರು ಸಾಮಾನ್ಯ ವೀಡಿಯೊ ಪ್ಲಾಟ್ಫಾರ್ಮ್ (CVP) ಮೂಲಕ ದೂರದಿಂದಲೇ ವಿಚಾರಣೆಗ ಹಾಜರಾಗಿದ್ದರು.
ಇದರ ವಿಚಾರಣೆ ನಡೆಯುತ್ತಿದ್ದಾಗ ಸಿವಿಪಿ ಮೂಲಕ ವಿಚಾಣೆಗೆ ಹಾಜರಾಗಿದ್ದ ಆರೋಪಿಯೊಬ್ಬ ಫೋನ್ನಿಂದ ಅಶ್ಲೀಲ ಸೌಂಡ್ ಬಂದಿದೆ. ಅದನ್ನು ನಿಲ್ಲಿಸುವಂತೆ ನ್ಯಾಯಾಧೀಶರು ಹೇಳಿದರೂ ಅದು ಮುಂದುವರೆದಿತ್ತು.
ಇದರಿಂದ ಕೋಪಗೊಂಡ ನ್ಯಾಯಾಧೀಶರು ಕಲಾಪವನ್ನು ಅರ್ಧಕ್ಕೆ ನಿಲ್ಲಿಸಿದರು. ಈ ಕೇಸ್ನ ವಿಚಾರಣೆಯನ್ನು ಮುಂದೂಡಿ, ಕೋರ್ಟ್ನಿಂದ ನಿರ್ಗಮಿಸಿದರು.