ಮೃಗಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ತಿನಿಸು ತಿನ್ನಿಸುವಾಗ ಅಥವಾ ಸೆಲ್ಫೀ ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿ ಇರಬೇಕು. ಹೀಗೆ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು ಘಟನೆಗಳಿಗೆ. ಈಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಬಾಲಕ ಪ್ರಾಣಾಪಾಯದಿಂದ ಅಲ್ಪದರಲ್ಲಿಯೇ ಪಾರಾಗಿರುವುದನ್ನು ನೋಡಬಹುದು.
ಅಪ್ಪ-ಅಮ್ಮನ ಜತೆ ಮೃಗಾಲಯ ಒಂದಕ್ಕೆ ಭೇಟಿ ನೀಡಿದ್ದ ಬಾಲಕ, ಅಲ್ಲಿರುವ ಜಿರಾಫೆಗೆ ಗಿಡವೊಂದನ್ನು ತಿನ್ನಲು ನೀಡಿದ್ದಾನೆ. ಜಿರಾಫೆ ಖುಷಿಯಿಂದ ಗಿಡ ಬಾಯಿಗೆ ಹಾಕಿಕೊಳ್ಳಲು ಎಳೆದುಕೊಂಡಿದೆ. ಬಾಲಕ ಆ ಗಿಡವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಬಾಲಕ ಕೂಡ ಜಿರಾಫೆ ಜತೆ ಮೇಲೆ ಹೋಗಿದ್ದಾನೆ.
ಒಂದು ವೇಳೆ ಜಿರಾಫೆ ಮಗುವನ್ನು ಅತ್ತ ಕಡೆ ಎಳೆದುಕೊಂಡಿದ್ದರೆ ಅಥವಾ ಬಾಲಕ ಕೈಯನ್ನು ಬಿಟ್ಟಿದ್ದರೆ ಕೆಳಕ್ಕೆ ಬಿದ್ದು ಭಾರಿ ಅಪಾಯ ಆಗುವ ಸಾಧ್ಯತೆ ಇತ್ತು. ಆದರೆ ಅಷ್ಟೊತ್ತಿಗಾಗಲೇ ಆತನ ಅಪ್ಪ-ಅಮ್ಮ ಬಾಲಕನನ್ನು ಹಿಡಿದು ಕೆಳಕ್ಕೆ ಇಳಿಸಿದ್ದಾರೆ.
ಈ ವಿಡಿಯೋ ನೋಡುಗರ ಎದೆ ಝಲ್ಲೆನಿಸುವಂತೆ ಇದ್ದರೂ ಇದಾದ ಮೇಲೆ ಅಮ್ಮ ಜೋರಾಗಿ ನಗುವುದನ್ನು ನೋಡಬಹುದು. ಯಾರಾದರೂ ತಮ್ಮ ಮಕ್ಕಳಿಗೆ ಹೀಗೆ ಆಗಿದ್ದರೆ ಅಲ್ಲಿಯೇ ಶಾಕ್ ಆಗುತ್ತಿದ್ದರು. ಆದರೆ ಈ ವಿಡಿಯೋದಲ್ಲಿನ ಮಹಿಳೆ ಅದನ್ನೂ ಹಾಸ್ಯದ ರೂಪದಲ್ಲಿ ತೆಗೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಟ್ಟಿನಲ್ಲಿ ಮೃಗಾಲಯಕ್ಕೆ ಹೋದಾಗ ಎಷ್ಟು ಜಾಗರೂಕರಾಗಿ ಇರಬೇಕು ಎನ್ನುವುದನ್ನು ಈ ವಿಡಿಯೋ ತೋರಿಸುತ್ತದೆ.
https://twitter.com/_B___S/status/1594117503726264322?ref_src=twsrc%5Etfw%7Ctwcamp%5Etweetembed%7Ctwterm%5E1594117503726264322%7Ctwgr%5Ed265798448dca84f658e179867ab6eb9c1d95c27%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-giraffe-lifts-a-boy-in-the-air-as-he-attempts-to-feed-the-herbivore-6443377.html
https://twitter.com/_B___S/status/1594117503726264322?ref_src=twsrc%5Etfw%7Ctwcamp%5Etweetembed%7Ctwterm%5E1594259140129456128%7Ctwgr%5Ed265798448dca84f658e179867ab6eb9c1d95c27%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fwatch-giraffe-lifts-a-boy-in-the-air-as-he-attempts-to-feed-the-herbivore-6443377.html