alex Certify ಬಾಹ್ಯಾಕಾಶ ಯಾತ್ರೆಯ ಮೊದಲ ಭಾರತೀಯ ರಾಕೇಶ್​ ಶರ್ಮಾರನ್ನು ನೆನಪಿಸಿಕೊಂಡ ʼಟ್ವೀಟ್​ʼ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ಯಾತ್ರೆಯ ಮೊದಲ ಭಾರತೀಯ ರಾಕೇಶ್​ ಶರ್ಮಾರನ್ನು ನೆನಪಿಸಿಕೊಂಡ ʼಟ್ವೀಟ್​ʼ ವೈರಲ್​

ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಎತ್ತರವನ್ನು ತಲುಪುತ್ತಿದೆ. ಆದಾಗ್ಯೂ, ಆರಂಭದಲ್ಲಿ ಸಾಧನೆ ಮಾಡಿದವರು ಕೊನೆಕೊನೆಗೆ ತೆರೆಮರೆಗೆ ಸರಿದುಬಿಡುತ್ತಾರೆ. ಅಂಥವರಲ್ಲಿ ಒಬ್ಬರು ರಾಕೇಶ್​ ಶರ್ಮಾ.

ಅವರನ್ನು ಈಗ ನೆನಪಿಸಿಕೊಂಡಿದ್ದಾರೆ ಸಂಕೇತ್​ ಸಾನ್ವಿ. ಇವರು ತಮ್ಮ ಟ್ವೀಟ್‌ನಲ್ಲಿ ಬಾಹ್ಯಾಕಾಶ ಯಾನ ಕ್ಷೇತ್ರದಲ್ಲಿ ರಾಕೇಶ್ ಶರ್ಮಾ ಅವರ ಸಾಧನೆಗಳನ್ನು ಸ್ಮರಿಸಿದ್ದಾರೆ. “ನಾನು ಅವರನ್ನು AERO ಇಂಡಿಯಾ 96 ಸಮಯದಲ್ಲಿ ಭೇಟಿಯಾಗಿದ್ದರೆ. ಆ ಸಂದರ್ಭದಲ್ಲಿ ನಾನು ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದೆ ಮತ್ತು ಅವರು ಪರೀಕ್ಷಾ ಪೈಲಟ್ ಆಗಿದ್ದರಿಂದ ಅವರನ್ನು ಭೇಟಿಯಾಗಿದ್ದೆ ಎಂದು ಅವರನ್ನು ಸಂಕೇತ್​ ಸ್ಮರಿಸಿದ್ದಾರೆ.
ಅಂದಹಾಗೆ ರಾಕೇಶ್​ ಶರ್ಮಾ ಅವರು, ಬಾಹ್ಯಾಕಾಶ ಯಾತ್ರೆ ಮಾಡಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಪಂಜಾಬ್​ನ ಪಟಿಯಾಲದವರು. 1970 ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು.

1980ರ ದಶಕದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದಲ್ಲಿ ವ್ಯಾಪಕ ಸಂಶೋಧನೆಗಳು ನಡೆಯುತ್ತಿದ್ದವು. ಇದೇ ವೇಳೆ ಇಸ್ರೋದೊಂದಿಗೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಕೈಜೋಡಿಸಿತ್ತು. ಭಾರತ ಮತ್ತು ರಷ್ಯಾದ ಸಹಭಾಗಿತ್ವದಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲು ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು.

ಏಪ್ರಿಲ್ 3, 1984 ರಂದು ರಾಕೇಶ್ ಶರ್ಮಾ ಮತ್ತು ಯೂರಿ ಮಾಲಿಶೇವ್ ಹಾಗೂ ಗೆನ್ನಾಡಿ ಸ್ಟ್ರೆಕಲೋವ್ ಅವರೊಂದಿಗೆ ಸುಯೆಜ್ T-11 ಗಗನ ನೌಕೆಯ ಮೂಲಕ ಅಂತರಿಕ್ಷ ತಲುಪಿದ್ದರು. ಅಲ್ಲಿ ಅವರು ಸ್ಯಾಲ್ಯುಟ್ 7 ಆರ್ಬಿಟಲ್ ಸ್ಟೇಷನ್ ನಲ್ಲಿ 7 ದಿನ ಕಳೆದಿದ್ದರು. ಸರಿಯಾಗಿ 7 ದಿನ 21 ಗಂಟೆ ಮತ್ತು 40 ನಿಮಿಷಗಳ ಬಳಿಕ ಅವರು 1984 ರ ಏಪ್ರಿಲ್ 11 ರಂದು ಅವರು ಭೂಮಿಗೆ ಮರಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...