ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಬೀಳ್ಕೊಡುವುದು, ಪಾರ್ಟಿ ಮಾಡುವುದು ಇತ್ಯಾದಿ ಮಾಮೂಲು. ಇವೆಲ್ಲವೂ ಹೆಚ್ಚಾಗಿ ಸಮಾನ ಮನಸ್ಕರೊಡನೆ ನಡೆಯುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಮನೆ ಕೆಲಸದವಳು ತನ್ನ ಯಜಮಾನನಿಗೆ ಮನೆಯಲ್ಲಿಯೇ ಊಟ ಬಡಿಸಿ ಉಪಚಾರ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಅನಿಶ್ ಭಗತ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ತಾವು ಬೇರೆ ನಗರಕ್ಕೆ ವರ್ಗಾವಣೆಯಾದಾಗ ತಮ್ಮ ಮನೆ ಕೆಲಸದಾಗಿ ಹೇಗೆ ತಮ್ಮ ಮನೆಗೆ ಕರೆದು ಬೆಚ್ಚಗಿನ ವಿದಾಯ ಹೇಳಿದರು ಎಂದು ಅವರು ಇದರಲ್ಲಿ ತಿಳಿಸಿದ್ದಾರೆ.
ರೇಷ್ಮಾ ಎಂಬುವವರು ಮನೆಕೆಲಸದಲ್ಲಿ ಕೆಲ ವರ್ಷಗಳಿಂದ ತೊಡಗಿಸಿಕೊಂಡಿದ್ದರು. ನಾನು ಬೇರೆ ಊರಿಗೆ ವರ್ಗಾವಣೆಯಾದಾಗ ಅವರು ತಮ್ಮ ಮನೆಗೆ ನಮ್ಮ ಮನೆಯವರನ್ನೆಲ್ಲಾ ಸ್ವಾಗತ ಕೋರಿದರು. ಅವರ ಮನೆಗೆ ಹೋದಾಗ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಅದೆಷ್ಟು ರೀತಿಯ ಭಕ್ಷ್ಯಗಳನ್ನು ಅವರು ರೆಡಿ ಮಾಡಿದ್ದರು. ಅವೆಲ್ಲವನ್ನೂ ನೆನಪಿಸಿಕೊಂಡರೆ ಈಗಲೂ ಕಣ್ಣೀರು ಬರುತ್ತದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಕುಟುಂಬಸ್ಥರ ಜೊತೆ ಉತ್ಸಾಹದಿಂದ ರೇಷ್ಮಾ ನನಗೆ ಬೀಳ್ಕೊಟ್ಟರು ಎಂದಿದ್ದಾರೆ. ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ಭಾವುಕರಾಗಿದ್ದಾರೆ.