ಕೇರಳ: ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಲು ಭಕ್ತಾದಿಗಳು ಹೋಗುತ್ತಿದ್ದಾರೆ. ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಕ್ತ ಸಾಗರವೇ ಪಂದಳರಾಜನ ದರ್ಶನಕ್ಕೆ ಹರಿದು ಬರ್ತಾ ಇದೆ. ಹೀಗಾಗಿ ಭಕ್ತರಿಗೆ ಅನುಕೂಲ ಆಗಲಿ ಅಂತ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಹೌದು, ಎರಡು ವರ್ಷ ಕೊರೊನ ಇದ್ದಿದ್ದರಿಂದ ದರ್ಶನ ಭಾಗ್ಯ ಕೆಲವರಿಗೆ ಸಿಕ್ಕಿಲ್ಲ. ಆದ್ದರಿಂದ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಒಂದಿಷ್ಟು ಬದಲಾವಣೆ ಮಾಡಲು ಆಡಳಿತ ಮಂಡಳಿ ತೀರ್ಮಾನ ಮಾಡಿದ್ದಾರೆ.
ಅಯ್ಯಪ್ಪ ದರ್ಶನಕ್ಕೆ ಬೆಳಿಗ್ಗೆ 3ರಿಂದ ಮಧ್ಯಾಹ್ನ 1ರ ವರೆಗೆ ಮತ್ತು ಸಂಜೆ 4ರಿಂದ ಮಧ್ಯರಾತ್ರಿಯವರೆಗೆ ಅವಕಾಶ ಮಾಡಲಾಗಿತ್ತು. ಬೆಳಗ್ಗೆಯ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮಧ್ಯಾಹ್ನ 4ರಿಂದ ಪ್ರಾರಂಭವಾಗುತ್ತಿದ್ದ ದರ್ಶನ ಸಮಯವನ್ನು ಬದಲಾಯಿಸಲಾಗಿದೆ. ಒಂದು ಗಂಟೆ ಮೊದಲು ಅಂದರೆ, ಮಧ್ಯಾಹ್ನ 3ರಂದಲೇ ಪ್ರಾರಂಭಿಸಿ ರಾತ್ರಿ 11ರ ವರೆಗೆ ಅವಕಾಶ ನೀಡಲಾಗುತ್ತಿದೆಯಂತೆ.
ಇನ್ನು ಬರುವ ಭಕ್ತಾಧಿಗಳಿಗೆ ಅನುಕೂಲ ಆಗಲಿ ಅಯ್ಯಪ್ಪನ ದರ್ಶನ ಭಾಗ್ಯ ಎಲ್ಲರಿಗೂ ಸಿಗಲಿ ಅಂತ ಆಡಳಿತ ಮಂಡಳಿ ಈ ನಿರ್ಧಾರ ಮಾಡಿದೆ. ಅಯ್ಯಪ್ಪ ದೇವಸ್ಥಾನ ನವೆಂಬರ್ 16ರಿಂದ ಬಾಗಿಲು ತೆರೆದಿದೆ. ಸೋಮವಾರ ಒಂದೇ ದಿನ 3 ಲಕ್ಷ ಜನ ದರ್ಶನ ಪಡೆದಿದ್ದಾರೆ.