alex Certify ಎರಡು ತಲೆ, ನಾಲ್ಕು ಕಣ್ಣುಗಳಿರುವ ಕುರಿಮರಿ ಜನನ: ನೋಡಲು ಮುಗಿಬಿದ್ದ ಜನಸಾಗರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಲೆ, ನಾಲ್ಕು ಕಣ್ಣುಗಳಿರುವ ಕುರಿಮರಿ ಜನನ: ನೋಡಲು ಮುಗಿಬಿದ್ದ ಜನಸಾಗರ

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪ್ರತಿಪಾಡು ವಿಧಾನಸಭಾ ಕ್ಷೇತ್ರದ ಧಾರ್ವರಂ ಗ್ರಾಮದಲ್ಲಿ ಎರಡು ತಲೆ ಮತ್ತು ನಾಲ್ಕು ಕಣ್ಣುಗಳಿರುವ ಕುರಿಮರಿ ಜನಿಸಿದ್ದು, ಸುತ್ತಮುತ್ತಲಿನವರೆಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಈ ಕುರಿಯು ಮೋರುಕುರ್ತಿ ಸೂರಿಬಾಬು ಮತ್ತು ಪಂಪನಬೋನ ವೆಂಕಣ್ಣ ಅವರಿಗೆ ಸೇರಿದ್ದು. ಕುರಿಮರಿಗೆ ಡಬ್ಬಿಯಲ್ಲಿ ಹಾಕಿದ ಹಾಲನ್ನು ನೀಡಲಾಗುತ್ತಿದೆ. ಅದು ಎರಡೂ ಬಾಯಿಗಳಿಂದ ಹಾಲನ್ನು ಕುಡಿಯುತ್ತಿದೆ.

ಕುರಿಮರಿಯು ನಾಲ್ಕು ಕಣ್ಣುಗಳಿಂದ 360 ಡಿಗ್ರಿಯಲ್ಲಿ ಪೂರ್ಣ ಕೋನದಲ್ಲಿ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸುತ್ತದೆ. ಕುರಿ ಆರೋಗ್ಯವಾಗಿದ್ದು, ತುಂಬಾ ಚೆನ್ನಾಗಿ ಆಡುತ್ತಿದೆ ಎಂದು ಮಾಲೀಕರು ಹೇಳುತ್ತಾರೆ. ಆದರೆ ಪಶುವೈದ್ಯಕೀಯ ತಜ್ಞರು ಕುರಿಮರಿಯ ಅಸಾಮಾನ್ಯ ಜನನವನ್ನು ಆನುವಂಶಿಕ ಅಸ್ವಸ್ಥತೆಗಳಿಗೆ ಕಾರಣವೆಂದು ಹೇಳಿದ್ದಾರೆ.

ಈ ರೀತಿ ಅಸಮಾನ್ಯವಾಗಿ ಜನಿಸಿದಾಗ ಪೌಷ್ಟಿಕ ಆಹಾರವನ್ನು ನೀಡಬೇಕು. ಇದನ್ನು ಬೇರೆಯವುಗಳಿಗಿಂತ ಜೋಪಾನವಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ. ಈ ಹಿಂದೆ ಕೂಡ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಹಸುಗಳು, ಎಮ್ಮೆಗಳು, ಮೇಕೆಗಳು ಮತ್ತು ಕುರಿಗಳು ಅಸಾಮಾನ್ಯವಾಗಿ ಜನಸಿರುವ ನಿದರ್ಶನಗಳಿವೆ.

ಸದ್ಯ ಅಂತೂ ಈ ವಿಚಿತ್ರ ಕುರಿಮರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಇದನ್ನು ನೋಡಲು ಜನರು ಎಲ್ಲೆಡೆಯಿಂದ ಆಗಮಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...