ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ತಮ್ಮ ನಿವೃತ್ತಿಯ ನಂತರದ ಜೀವನಕ್ಕಾಗಿ ದೊಡ್ಡ ನಿಧಿಯನ್ನು ಸಂಗ್ರಹಿಸಲು ಕಷ್ಟಪಡುವುದು ಸಾಮಾನ್ಯ. ಹಣದುಬ್ಬರವನ್ನು ಗಮನಿಸಿದರೆ, ದೀರ್ಘಾವಧಿಯಲ್ಲಿ ಹಣದುಬ್ಬರವನ್ನು ಮೆಟ್ಟಿ ನಿಲ್ಲುವ ಲಾಭ ನೀಡುವ ಅಪಾಯ ಮುಕ್ತ ಹೂಡಿಕೆ ಮಾಡುವ ಅಗತ್ಯವಿದೆ.
ಮಾರುಕಟ್ಟೆಯಲ್ಲಿ ಅಂತಹ ಹಲವಾರು ಯೋಜನೆಗಳಿದ್ದರೂ, ಅವುಗಳಲ್ಲಿ ಕೆಲವು ನಿಶ್ಚಿತ ಠೇವಣಿಗಳು, ಸಾರ್ವಜನಿಕ ಭವಿಷ್ಯ ನಿಧಿಗಳು (ಪಿಪಿಎಫ್) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಪ್ರಮುಖವಾದವು.
ಎನ್ಪಿಎಸ್ ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಚಂದಾದಾರರಿಗೆ ಯೋಜಿತ ಉಳಿತಾಯಕ್ಕೆ ವ್ಯಾಖ್ಯಾನಿಸಲಾದ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಇದು ಭವಿಷ್ಯವನ್ನು ಪಿಂಚಣಿ ರೂಪದಲ್ಲಿ ಭದ್ರಪಡಿಸುತ್ತದೆ. ಇದು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಸಾಕಷ್ಟು ನಿವೃತ್ತಿ ಆದಾಯವನ್ನು ಒದಗಿಸುವ ಸಮಸ್ಯೆಗೆ ಸುಸ್ಥಿರ ಪರಿಹಾರ ನೀಡುವ ವ್ಯವಸ್ಥೆಯಾಗಿದೆ.
ಖಾಸಗಿ ವಲಯದ ಉದ್ಯೋಗಿಯಾಗಿದ್ದರೆ, ಸಾಧ್ಯವಾದಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸಬೇಕು. ಎನ್ಪಿಎಸ್ ನಲ್ಲಿ 26 ವರ್ಷ ವಯಸ್ಸಿನಲ್ಲಿ ತಿಂಗಳಿಗೆ 4000 ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ರಾರಂಭಿಸಿದರೆ ಮತ್ತು 60 ವರ್ಷ ವಯಸ್ಸಿನವರೆಗೆ ಹೂಡಿಕೆಯನ್ನು ಮುಂದುವರಿಸಿದರೆ, ಮಾಸಿಕ ಪಿಂಚಣಿಯಾಗಿ 35,000 ರೂಪಾಯಿಗಳನ್ನು ಗಳಿಸಬಹುದು. ಬಡ್ಡಿದರವನ್ನು ಶೇಕಡಾ 11 ರಷ್ಟು ಇಟ್ಟುಕೊಂಡು ಈ ಲೆಕ್ಕಾಚಾರವನ್ನು ಮಾಡಲಾಗುತ್ತದೆ.
26 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 60 ವರ್ಷವನ್ನು ತಲುಪಿದಾಗ ಒಟ್ಟು ಹೂಡಿಕೆ 16,32,000 ರೂ. ಆಗಲಿದ್ದು ಈ ಹಂತದಲ್ಲಿ, ಒಟ್ಟು ಕಾರ್ಪಸ್ 1,77,84,886 ರೂ. ಆಗಿರುತ್ತದೆ. ಕೇವಲ 16,32,000 ರೂ. ಹೂಡಿಕೆ ಮಾಡಿದ್ದು ಪಡೆಯುವುದು ಸುಮಾರು 2 ಕೋಟಿ ರೂ. ಆಗಬಹುದು.