alex Certify ಪ್ರೇಯಸಿ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರಿಯಕರ: ನಿಷ್ಕಲ್ಮಷ ಪ್ರೀತಿಗೆ ಸಾಕ್ಷಿಯಾದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರಿಯಕರ: ನಿಷ್ಕಲ್ಮಷ ಪ್ರೀತಿಗೆ ಸಾಕ್ಷಿಯಾದ ಗ್ರಾಮಸ್ಥರು

ಲೈಲಾ – ಮಜ್ನು, ಹೀರ್ – ರಾಂಜಾ, ರೋಮಿಯೋ – ಜೂಲಿಯಟ್ ಇವರೆಲ್ಲರ ಪ್ರೇಮ್ ಕಹಾನಿಯನ್ನ ನೀವೆಲ್ಲ ಕೇಳಿರ್ತಿರಾ ? ಒಬ್ಬರಿಗೊಸ್ಕರ ಜೀವ ಕೊಟ್ಟಿರುವ ಅಮರ ಪ್ರೇಮಿಗಳು ಇವರು. ಆದರೆ ಇತ್ತೀಚೆಗೆ ಪ್ರೀತಿ-ಪ್ರೇಮ ಅರ್ಥವೇ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆದ ಪರಿಚಯ ಮೋಸ-ಕೊಲೆಯಲ್ಲಿ ಅಂತ್ಯಗೊಂಡಿರುತ್ತೆ. ಆದರೆ ಇತ್ತೀಚೆಗೆ ನಡೆದ ಘಟನೆಯೊಂದು ಯುವ ಪ್ರೇಮಿಗಳಿಗೆ ಮಾದರಿಯಾಗಿದೆ. ಇಲ್ಲಿ ಪ್ರಿಯಕರ ತನ್ನ ಗೆಳತಿ ಸಾವನ್ನಪ್ಪಿದ ನಂತರವೂ ಆಕೆಗೆ ತಾಳಿ ಕಟ್ಟಿ ಜೀವನ ಪರ್ಯಂತ ನೀನೆ ನನ್ನ ಹೆಂಡತಿ ಎಂದು ಹೇಳಿದ್ದಾನೆ.

ತನ್ನ ಬಹುಕಾಲದ ಗೆಳತಿ ಅನಾರೋಗ್ಯದಿಂದ ಮೃತಪಟ್ಟ ನಂತರ ಬಿಟುಪಾನ್ ತಮುಲಿ ಅನ್ನೊ ಯುವಕ ತನ್ನ ಬಹುಕಾಲ ಗೆಳತಿ ಪ್ರಾರ್ಥನಾ ಬೋರಾ ಮೃತದೇಹಕ್ಕೆನೇ ತಾಳಿ ಕಟ್ಟಿ, ಆಕೆಯನ್ನ ಎಷ್ಟು ಪ್ರೀತಿಸುತ್ತಿದ್ದ ಅನ್ನೋದನ್ನ ತೋರಿಸಿದ್ದಾನೆ. ಅಷ್ಟೆ ಅಲ್ಲ ತಾನು ಬದುಕಿರೋವರೆಗೂ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಆಣೆ ಮಾಡಿದ್ದಾನೆ. ಅಸ್ಸಾಂ ಗುವಾಹಟಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ.

ಅಸ್ಸಾಂನ ಮೊಯಿರ್ಗಾಂವ್ ನಿವಾಸಿಯಾಗಿರೋ ಬಿಟುಪಾನ್ ತಮುಲಿ ಮತ್ತು ಕೊಸುವಾ ಗ್ರಾಮ ನಿವಾಸಿಯಾಗಿರುವ ಪ್ರಾರ್ಥನಾ ಬೋರಾ ಇಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಎರಡು ಗ್ರಾಮದವರು ಸಾಕ್ಷಿಯಾಗಿದ್ದರು. ಇಬ್ಬರ ಕುಟುಂಬ ಕೂಡಾ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಕೂಡಾ ನೀಡಿದ್ದರು. ಇತ್ತೀಚೆಗೆ ಪ್ರಾರ್ಥನಾ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿತು. ಅದಕ್ಕೆ ಚಿಕಿತ್ಸೆಯನ್ನ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಿದ್ದಾಳೆ.

ಗೆಳತಿಯ ಸಾವಿನಿಂದ ಬಿಟುಪಾನ್ ಶಾಕ್ ಆಗಿದ್ದಾನೆ. ಎಲ್ಲರೂ ಎಷ್ಟೆ ಸಮಾಧಾನ ಮಾಡಿದರೂ ಆತನ ದುಃಖ ಮಾತ್ರ ಕಡಿಮೆ ಆಗಿರಲಿಲ್ಲ. ಆಗ ಬಿಟುಪಾನ್ ಗೆಳತಿಯ ಅಂತ್ಯಸಂಸ್ಕಾರದ ಸಮಯದಲ್ಲೇ ಆಕೆಗೆ ಹಣೆಗೆ ಸಿಂಧೂರ ಇಟ್ಟು, ತಾನು ಬದುಕಿರೋ ಅಷ್ಟು ದಿನ ನೀನೇ ನನ್ನ ಹೆಂಡತಿ ಅಂತ ಹೇಳಿದ್ದಾನೆ. ಈ ಘಟನೆ ಗ್ರಾಮಸ್ಥರಿಗೆ ಇನ್ನಷ್ಟು ಭಾವುಕರನ್ನಾಗಿ ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...