ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ. ಆಕರ್ಷಕವಾಗಿ ಕಾಣಲು ಬಾಹ್ಯ ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವ ಪಡೆದಿವೆ. ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ.
ಬೇರೆಯವರನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯವೊಂದೇ ಸಾಕಾಗೋದಿಲ್ಲ. ಧ್ವನಿ ಹಾಗೂ ಆತನ ದೇಹದ ವಾಸನೆ ಕೂಡ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ಈ ಮೊದಲು ಮುಖ ಅಥವಾ ದೇಹ ಆಕರ್ಷಿಸುತ್ತದೆ ಎಂದು ನಂಬಲಾಗಿತ್ತು. ಆದ್ರೆ ಈಗ ವ್ಯಾಖ್ಯಾನ ಬದಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಾಮಾಜಿಕ ಬಾಂಧವ್ಯಕ್ಕೆ ಧ್ವನಿ ಹಾಗೂ ದೇಹದ ವಾಸನೆ ಮಹತ್ವದ ಪಾತ್ರ ವಹಿಸುತ್ತಿದೆ. ಕೇವಲ ದಾಂಪತ್ಯಕ್ಕೊಂದೇ ಅಲ್ಲ ಸ್ನೇಹ ಹಾಗೂ ವೃತ್ತಿಪರ ಸಂಬಂಧದ ಮೇಲೂ ಇದು ಬಹಳ ಪ್ರಭಾವ ಬೀರುತ್ತಿದೆ.
ಹಿಂದೆ ಧ್ವನಿ ಹಾಗೂ ದೇಹದ ವಾಸನೆ ಬಗ್ಗೆ ನಡೆದ ಸಂಶೋಧನೆಗಳನ್ನು ಪರಿಗಣಿಸಲಾಗಿದೆ. ಸಂಶೋಧಕರ ಪ್ರಕಾರ ಕಣ್ಣಿನ ಜೊತೆಗೆ ಮೂಗು ಹಾಗೂ ಕಿವಿ ಕೂಡ ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂರು ಇಂದ್ರಿಯಗಳ ಮೂಲಕ ಆಕರ್ಷಣೆಗೊಳಗಾಗಿ ಶುರುವಾದ ಸಂಬಂಧ ಬಹಳ ದಿನಗಳವರೆಗೆ ಇರುತ್ತದೆ.