ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಅಂತಹ ಕೆಲವು ಆಹಾರ ಪದಾರ್ಥಗಳ ಲಿಸ್ಟ್ ಇಲ್ಲಿವೆ ನೋಡಿ.
* ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಅಧ್ಯಯನಗಳ ಪ್ರಕಾರ, ವಾರದಲ್ಲಿ 6 ಕ್ಕಿಂತ ಹೆಚ್ಚಿನ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಕ್ಯಾನ್ಸರ್ ಸಮಸ್ಯೆ ಕಮ್ಮಿ ಆಗುತ್ತದೆಯಂತೆ.
* ಅಣಬೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಧ್ಯಯನಗಳ ಪ್ರಕಾರ, ಬಿಳಿ ರಕ್ತಕಣಗಳ ಕಾರ್ಯ ಚಟುವಟಿಕೆಗಳನ್ನು ಆರೋಗ್ಯಪೂರ್ಣವಾಗಿರಿಸುತ್ತದೆ.
* ಗೆಣಸು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರೊಂದಿಗೆ ತ್ವಚೆಗೆ ಕೂಡ ಪೋಷಣೆ ನೀಡುತ್ತದೆ. ಇದರಲ್ಲಿರುವ ವಿಟಮಿನ್ ಎ ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಇದರ ಜೊತೆ ಕ್ಯಾರೆಟ್, ಕುಂಬಳಕಾಯಿ ಕೂಡ ಸೇವಿಸಬಹುದು.
* ಕಿತ್ತಳೆಯಂಥ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ವಿಟಮಿನ್ ಸಿ ಇರುವ ಹಣ್ಣುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಇರುತ್ತದೆ. ಅದರಲ್ಲೂ ಕಿತ್ತಳೆ ಹಣ್ಣು ನೆಗಡಿ, ಜ್ವರ ಕಾಡದಂತೆ ಕಾಪಾಡುತ್ತದೆ. ಈ ಹಣ್ಣಿನಲ್ಲಿರುವ ಬೀಟಾಕೆರೋಟಿನ್ ದೇಹದಲ್ಲಿನ ಜೀವ ಕಣಗಳನ್ನು ಸಂರಕ್ಷಿಸುತ್ತದೆ. ಕಿತ್ತಳೆಯಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೇ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿನ ನಾರಿನಾಂಶ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.
* ವಿಟಮಿನ್ ಇ ಹೊಂದಿರುವ ಕಿವಿ ಹಣ್ಣು ವೈರಲ್ ಹಾಗೂ ಬ್ಯಾಕ್ಟೀರಿಯಾ ಸೋಂಕಿನಿಂದ ದೇಹವನ್ನು ಕಾಪಾಡುತ್ತದೆ.
* ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಪಾಡುವ ಶಕ್ತಿ ಶುಂಠಿಗೆ ಇದೆ. ಬಿಸಿಯಾದ ಪಾನೀಯಗಳ ಜೊತೆ ಇದನ್ನು ಸೇರಿಸಿ ಕುಡಿಯಿರಿ.