ಕೃತಕ ಬುದ್ಧಿಮತ್ತೆಯಿಂದ ಈಗ ಎಲ್ಲವೂ ಸಾಧ್ಯವಾಗಿದೆ. ಇದೀಗ ಚರ್ಮದಂತಹ ಎಲೆಕ್ಟ್ರಾನಿಕ್ಸ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಸ್ಮಾರ್ಟ್ವಾಚ್ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ವಾಚ್ ಕಟ್ಟಿಕೊಂಡರೆ ಅದು ನಮ್ಮ ಆರೋಗ್ಯದ ಆರೋಗ್ಯದ ಮೇಲ್ವಿಚಾರಣೆ ಮತ್ತು ರೋಗನಿರ್ಣಯವನ್ನು ಮಾಡುತ್ತದೆ ಎಂದು ಹೇಳಲಾಗಿದೆ !
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನೊಂದಿಗೆ ಆರೋಗ್ಯ ದತ್ತಾಂಶವನ್ನು ದೇಹದಲ್ಲಿ ಆಂತರಿಕವಾಗಿ ವಿಸ್ತರಿಸಬಹುದಾದ ನ್ಯೂರೋಮಾರ್ಫಿಕ್ ಸಾಧನಗಳ ಸಹಾಯದಿಂದ ಹೀಗೊಂದು ಎಲೆಕ್ಟ್ರಾನಿಕ್ಸ್ ರೂಪಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಇವುಗಳ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಇವುಗಳ ಸಾಮರ್ಥ್ಯವನ್ನು ಇನ್ನೂ ಅರಿತುಕೊಂಡಿಲ್ಲ. ಆರೋಗ್ಯದ ಮೇಲ್ವಿಚಾರಣೆ ಮತ್ತು ರೋಗನಿರ್ಣಯವನ್ನು ಮಾಡಲು ಸಾಧ್ಯವಾಗುವಂತೆ ಸಕಲ ರೀತಿಯಲ್ಲಿ ಅಧ್ಯಯನ ನಡೆಸಲಾಗುತ್ತಿದ್ದು, ವೈದ್ಯಕೀಯ ಸಂವೇದಕಗಳು ಈ ತಂತ್ರಜ್ಞಾನದಿಂದ ಮುಂದಿನ ದಿನಗಳಲ್ಲಿ ಸಾಧ್ಯವಾಗಬಹುದು ಎಂದು ಅವರು ಹೇಳಿದ್ದಾರೆ.
ಇಂತಹ ಚರ್ಮದ ರೀತಿಯ ಸಾಧನವನ್ನು ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಎನರ್ಜಿ (DOE) ಅರ್ಗೋನ್ನೆ ನ್ಯಾಷನಲ್ ಲ್ಯಾಬೊರೇಟರಿ ಮತ್ತು ಚಿಕಾಗೋ ವಿಶ್ವವಿದ್ಯಾಲಯದ ಪ್ರಿಟ್ಜ್ಕರ್ ಸ್ಕೂಲ್ ಆಫ್ ಮಾಲಿಕ್ಯುಲರ್ ಇಂಜಿನಿಯರಿಂಗ್ (PME) ಜಂಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅರ್ಗೋನ್ನ ನ್ಯಾನೊಸೈನ್ಸ್ ಮತ್ತು ಟೆಕ್ನಾಲಜಿ ವಿಭಾಗದಲ್ಲಿ ಜಂಟಿ ಆಶ್ರಯದಲ್ಲಿ ಚಿಕಾಗೊ ಪಿಎಂಇಯಲ್ಲಿ ಸಹಾಯಕ ಪ್ರಾಧ್ಯಾಪಕ ಸಿಹಾಂಗ್ ವಾಂಗ್ ಈ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಹೃದ್ರೋಗ, ಕ್ಯಾನ್ಸರ್ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ – ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಪತ್ತೆ ಹಚ್ಚಬಹುದಾಗಿದೆ ಎನ್ನಲಾಗಿದೆ.